ಸರ್ಕಾರಿ ಉದ್ಯೋಕಾಂಕ್ಷಿಗಳಿಗೆ ದೊಡ್ಮನೆ ಸಾಥ್ : ರಾಘವೇಂದ್ರ ರಾಜ್‍ಕುಮಾರ್ ಹೇಳಿದ್ದೇನು..?

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕಾಗಿ ಸಾಕಷ್ಟು ಜನ ಕಾಯ್ತಾ ಇದ್ದಾರೆ. ವರ್ಷಾನುಗಟ್ಟಲೇಯಿಂದ ಓದುತ್ತಾ ಪರೀಕ್ಷೆಗಾಗಿ ಕಾಯ್ತಾ ಇದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಉದ್ಯೋಗಗಳಿಗೆ ಸರಿಯಾದ ನೇಮಕಾತಿ ಆಗ್ತಿಲ್ಲ. ಕೆಲಸಕ್ಕಾಗಿ ಎಲ್ಲವನ್ನು ತ್ಯಾಗ ಮಾಡ್ತಾ ಇರುವವರ ಗೋಳು ಕೇಳುವವರು ಯಾರು. ಇದೀಗ ಅವರ ಸಮಸ್ಯೆಗಳಿಗೆ ಧ್ವನಿಯಾಗಿದೆ ದೊಡ್ಮನೆ.

ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡಿಲ್ಲ. ಶೀಘ್ರವೇ ನೇಮಕಾತಿ ಆರಂಭಿಸಬೇಕು ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಮನವಿ ಮಾಡಿದ್ದಾರೆ. ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತದೆ. ಯುವಕರು ಕಾಲೇಜು, ಯೂನಿವರ್ಸಿಟಿಗಳಲ್ಲಿ ಸಾಕಷ್ಟು ಓದಿದ್ದಾರೆ. ಆದರೆ ಅಷ್ಟೆಲ್ಲ ಓದಿ ಮನೆಯಲ್ಲಿಯೇ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ನೇಮಕಾತಿ ಮಾಡಬೇಕು. ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ನೇಮಕಾತಿ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಹೊಸ ನೇಮಕಾತಿಗೆ ಸಂಬಂಧಿಸಿದಂತೆ ಉದ್ಯೋಗಕಾಂಕ್ಷಿಗಳು ಆಗಸ್ಟ್ 11 ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಹಿರಿಯ ನಟ ರಾಘಣ್ಣ ಅವರು ಬೆಂಬಲ ಸೂಚಿಸಲಿದ್ದಾರೆ. ಉದ್ಯೋಗಕಾಂಕ್ಷಿಗಳಿಗೆ ಸಪೋರ್ಟ್ ಮಾಡಲಿದ್ದಾರೆ. ಅಭ್ಯರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದ್ದು ಮುಂದೆ ಏನು ಮಾಡೋದು ಅಂತ ಯೋಜನೆಯಲ್ಲಿದ್ದಾರೆ. ಅಕಾಡೆಮಿಗಳು ಮುಚ್ಚಲಾಗುತ್ತಿದೆ. ಜನಗಳು ವಾಪಸ್ ಊರುಗಳಿಗೆ ಹೋಗಲು ಆಗದೇ ಬೆಂಗಳೂರಲ್ಲೇ ಇದ್ದಾರೆ. ಸರ್ಕಾರ ಆದಷ್ಟೂ ಬೇಗ ಹೊಸ ನೇಮಕಾತಿಗಳನ್ನ ಆರಂಭಿಸಬೇಕು ಅಂತ ಒತ್ತಾಯಿಸಿದ್ದಾರೆ. ಇಟ್ಟಾರೆ ಕೆಲಸವಿಲ್ಲದೆ, ಸರ್ಕಾರಿ ಕೆಲಸವೇ ಬೇಕೆಂದು ಇಷ್ಟು ವರ್ಚ ಕಾಯುತ್ತಿರುವವರಿಗೆ ದೊಡ್ಮನೆ ಬೆಂಬಲ ಸಿಕ್ಕದೆ. ಇನ್ಮೇಲಾದ್ರೂ ಸರ್ಕಾರ ನೇಮಕಾತಿ ಮಾಡುತ್ತಾ ನೋಡಬೇಕಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ