ಅಮೆರಿಕಾದಲ್ಲಿ ಔಷಧಿಗಳ ಮೇಲೆ ಭಾರೀ ಸುಂಕ ಹೇರಿಕೆ : ಭಾರತ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ..?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ವಸ್ತುಗಳ ಮೇಲಿನ ಸುಂಕವನ್ನ ದಿನೇ ದಿನೇ ಹೆಚ್ಚಳ ಮಾಡುತ್ತಲೇ ಇದ್ದಾರೆ. ಈಗಾಗಲೇ ಉಕ್ಕು ಮತ್ತು ಅಲ್ಯುಮಿನಿಯಮ್ ಆಮದಿನ ಮೇಲೆ ಹೆಚ್ಚುವರಿ ಸುಂಕ ನಿಗದಿ ಮಾಡಿದ್ದಾರೆ. ಇದೀಗ ತಾಮ್ರದ ಮೇಲೂ ಹೊಸದಾಗಿ ಶೇಕಡ 50 ರಷ್ಟು ಸುಂಕವನ್ನ ಘೋಷಣೆ ಮಾಡಿದ್ದಾರೆ. ಔಷಧಗಳ ಮೇಲಿನ ಸುಂಕ ಹೆಚ್ಚಳದ ಬಗ್ಗೆಯೂ ಟ್ರಂಪ್ ಈಗಲೇ ಎಚ್ಚರಿಸಿದ್ದಾರೆ. ಅದರಲ್ಲೂ ಶೇಕಡ 200 ರಷ್ಟು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ. ಹಾಗಾದ್ರೆ ಅಮೆರಿಕಾದ ಅಧ್ಯಕ್ಷರ ಈ ನಿರ್ಧಾರದಿಂದ ಭಾರತಕ್ಕೆ ಆಗುವ ನಷ್ಟವೇನು ಎಂಬುದನ್ನು ನೋಡೋಣಾ.

2024-25ರಲ್ಲಿ ಭಾರತವು ಜಾಗತಿಕವಾಗಿ 2 ಬಿಲಿಯನ್ ಅಮೆರಿಕಮ್ ಡಾಲರ್ ಮೌಲ್ಯದ ತಾಮ್ರ ಮತ್ತು ತಾಮ್ರದ ಉತ್ಪನ್ನಗಳನ್ನು ರಫ್ತು ಮಾಡಿದೆ. ಈ ಪೈಕಿ 360 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ ಶೇಕಡ 17ರಷ್ಟನ್ನು ಅಮೆರಿಕನ್ ಮಾರುಕಟ್ಟೆಗಳಿಹೆ ಭಾರತ ರಫ್ತು ಮಾಡಿದೆ. ವ್ಯಾಪಾರ ದತ್ತಾಂಶದ ಪ್ರಕಾರ, ಸೌದಿ ಅರೇಬಿಯಾ ಮತ್ತು ಚೀನಾ ನಂತರ ಅಮೆರಿಕವು ಭಾರತದ ತಾಮ್ರ ರಫ್ತಿಗೆ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ ತಾಮ್ರವು ನಿರ್ಣಾಯಕ ಖನಿಜವಾಗಿದ್ದು, ಇಂಧನ ಉತ್ಪಾದನೆ ಮತ್ತು ಮೂಲಕಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾವಿ ಬಳಸಲಾಗುತ್ತದೆ.

ಹೊಸ ಸುಂಕಗಳ ನಂತರ ಅಮೆರಿಕದ ಬೇಡಿಕೆಯಲ್ಲಿನ ಯಾವುದೇ ಕುಸಿತವನ್ನು ಭಾರತದ ದೇಶೀಯ ಉದ್ಯಮವು ಹೀರಿಕೊಳ್ಳುವ ಸಾಧ್ಯತೆ ಇದೆ. ಔಷಧಿ ವಲಯ ಭಾರತಕ್ಕೆ ಹೆಚ್ಚು ಹಾನಿ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಶೇಕಡ 200 ರಷ್ಟು ಸುಂಕ ವಿಧಿಸುವುದರಿಂದ ಬೇಡಿಕೆಯ ಮೇಲೆ ತೀವ್ರ ಪರಿಣಾಮ ಬೀರಬಹುದು.



source https://suddione.com/heavy-tariffs-on-medicines-in-america-how-will-this-affect-india/

Post a Comment

0 Comments