
ನವದೆಹಲಿ: ರಾಜ್ಯ ರಾಜಕೀಯದಲ್ಲಿ ಅದರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ಚರ್ಚಿತ ಗಾಳಿ ಜೋರಾಗಿ ಬೀಸುತ್ತಾ ಇದೆ. ಈ ವರ್ಷ ಖಂಡಿತ ಸಿಎಂ ಸ್ಥಾನ ಬದಲಾಗುತ್ತೆ ಎಂಬ ಚರ್ಚೆಗಳು ಆಗ್ತಾ ಇದಾವೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ನಾನೇ ಸಿಎಂ ಎಂಬ ಹೇಳಿಕೆಯನ್ನ ನೀಡ್ತಾ ಇದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗೆ ಜೋರು ಮಾತುಕತೆ, ಚರ್ಚೆಗಳು ನಡೆಯುತ್ತಾ ಇದಾವೆ. ದೆಹಲಿಗೆ ಹೋಗಿರುವುದೇ ನಾಯಕತ್ವ ಬದಲಾವಣೆಯ ಚರ್ಚೆಗೆ ಎಂಬ ಮಾತುಗಳು ಕೇಳಿ ಬರ್ತಾ ಇದಾವೆ. ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಸಾಕಷ್ಟು ಹೋರಾಟ ಮಾಡ್ತಾ ಇದಾರೆ ಎಂಬ ಮಾತುಗಳು ಕೇಳಿ ಬರ್ತಾ ಇರುವಾಗಲೇ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಚರ್ಚೆ ಬಗ್ಗೆ ತಿಳಿಸಿದ್ದಾರೆ.

ನಿನ್ನೆ ಸುರ್ಜೆವಾಲ್ ಜೊತೆಗೆ ಮೀಟಿಂಗ್ ಇತ್ತು. ನಾನು, ಡಿಕೆ ಶಿವಕುಮಾರ್ ಮತ್ತೆ ಅವರು ಮೂರು ಜನ ಮೀಟಿಂಗ್ ಮಾಡಿದೆವು. ಉಳಿದರುವಂತ ಬೋರ್ಡ್, ಕಾರ್ಪೋರೇಷನ್ ಗಳಿಗೆ ನಮ್ಮ ಕಾರ್ಯಕರ್ತರನ್ನ ಛೇರ್ಮನ್ ಮಾಡುವುದಕ್ಕೆ ಚರ್ಚೆ ನಡೆದಿದೆ. ಚರ್ಚೆ ಅಪೂರ್ಣವಾಗಿದೆ.
ಅವರು 16ಕ್ಕೆ ಬೆಂಗಳೂರಿಗೆ ಬರ್ತಾರೆ, ಆಗ ಎಲ್ಲವನ್ನು ಫೈನಲ್ ಮಾಡ್ತಾರೆ. ಇದಿಷ್ಟೇ ಸದ್ಯಕ್ಕೆ ಚರ್ಚೆ ಮಾಡಿದ್ದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಸುರ್ಜೆವಾಲ ಅವರ ಬಳಿ ಏನು ಚರ್ಚೆ ಮಾಡಿರಬಹುದು ಎಂಬುದರ ಬಗ್ಗೆ ಸಾಮಾನ್ಯವಾಗಿಯೇ ಬಹಳಷ್ಟು ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಈಗ ಚರ್ಚೆ ಆದ ವಿಷಯ ಏನು ಎಂಬುದನ್ನ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.


source https://suddione.com/what-was-the-discussion-with-surjewala-siddaramaiah-gives-a-clear-answer/
0 Comments
If u have any queries, Please let us know