
ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರು ರಾಜಕಾರಣದಲ್ಲಿ ಸ್ಥಾನ ಪಡೆಯುವಂತಿಲ್ಲ. ಆ ಸ್ಥಾನದಲ್ಲಿದ್ರು ನಿವೃತ್ತಿ ಹೊಂದಬೇಕು ಎಂಬ ನಿಯಮವಿದೆ. 75 ತುಂಬಿದವರಿಗೆ ಬಿಜೆಪಿ ಟಿಕೆಟ್ ಕೂಎ ನೀಡುವುದಿಲ್ಲ. ಆದರೆ ಈಗ ಆ ನಿಯಮವನ್ನು ಮೋದಿ ಅವರು ಪಾಲನೆ ಮಾಡ್ತಾರಾ ಎಂಬ ಪ್ರಶ್ನೆಯನ್ನು ವಿಪಕ್ಷ ನಾಯಕರು ಕೇಳ್ತಾ ಇದ್ದಾರೆ. ಇದಕ್ಕೆ ಕಾರಣ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆ. ನಾಯಕರು 75 ವರ್ಷ ತುಂಬಿದ ನಂತರ ಇತರರಿಗುಹ ಅವಕಾಶ ನೀಡಬೇಕು ಎಂಬ ಹೇಳಿಕೆಯನ್ನು ಮತ್ತೊಮ್ಮೆ ಪುನರ್ ಉಚ್ಛರಿಸಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮೋಹನ್ ಭಾಗವತ್ ಅವರು, ಯಾರಾದರೂ ನಿಮಗೆ 75 ವರ್ಷ ತುಂಬಿದ್ದಕ್ಕೆ ಅಭಿನಂದನೆ ಸಲ್ಲಿಸಿದರೆ ನೀವೂ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದರ್ಥ. ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಭಾಗವತ್ ತಮ್ಮ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಈಗ ವಿರೋಧ ಪಕ್ಷದ ನಾಯಕರು ಮೋದಿ ಹೆಸರನ್ನು ಇದಕ್ಕೆ ಲಿಂಕ್ ಮಾಡುತ್ತಾ ಇದ್ದಾರೆ.
ಯಾಕಂದ್ರೆ ಈ ವರ್ಷದ ಸೆಪ್ಟೆಂಬರ್ ಗೆ ಪ್ರಧಾನಿ ಮೋದಿ ಅವರಿಗೆ 75 ವರ್ಷ ತುಂಬುತ್ತದೆ. ಈ ವಿಚಾರವಾಗಿ ಶಿವಸೇನಾ ನಾಯಕ ಸಂಜಯ್ ರಾವತ್ ಮಾತನಾಡಿ, ಪ್ರಧಾನಿ ಮೋದಿ ಅವರು ಅಡ್ವಾಣಿ, ಮುರಳಿ ಮನೋಹರ್, ಜಸ್ವಂತ್ ಸಿಂಗ್ ಅವರಂತಹ ದೊಡ್ಡ ನಾಯಕರನ್ನು ನಿವೃತ್ತಿ ಹೊಂದುವಂತೆ ಒತ್ತಾಯೊಸಿದ್ದರು. ಮೋದಿ ಈಗ ಇದನ್ನು ಅನುಸರಿಸುತ್ತಾರೋ ಇಲ್ಲವೋ ಎಂಬುದನ್ನು ನೋಡೋಣಾ ಎಂದಿದ್ದಾರೆ.


source https://suddione.com/modi-turns-75-in-september-opposition-parties-question-whether-he-will-retire-as-prime-minister/
0 Comments
If u have any queries, Please let us know