ಮೊಬೈಲ್ ಬಳಕೆಯ ದುಷ್ಪರಿಣಾಮ : ಮಂಗಳೂರಿನಲ್ಲಿ 4000 ಮಕ್ಕಳಿಗೆ ದೃಷ್ಟಿದೋಷ.. ಈಗಲಾದರೂ ಎಚ್ಚೆತ್ತುಕೊಳ್ಳಿ ಪೋಷಕರೆ..!

ಮಂಗಳೂರು: ಮೊಬೈಲ್ ಅನ್ನೋ ಮಾಯೆ ದೊಡ್ಡವರನ್ನು ಮಾತ್ರ ಅಲ್ಲ ಮಕ್ಕಳು ಕೂಡ ಮೊಬೈಲ್ ನ ಬಿಡದಷ್ಟು ಅಡಿಕ್ಟ್ ಆಗಿದ್ದಾರೆ. ಮೊಬೈಲ್ ಇದ್ದರೇನೆ ಊಟ, ತಿಂಡಿ ಎಲ್ಲಾ. ಪೋಷಕರು ಕೂಡ ಮಕ್ಕಳಿಗೆ ಎಷ್ಟು ಅಭ್ಯಾಸ ಮಾಡಿಸಿದ್ದಾರೆ ಅಂದ್ರೆ ಸ್ವಲ್ಪ ಹಠ ಮಾಡಿದರೆ ಸಾಕು ಕೈಗೆ ಮೊಬೈಲ್ ಕೊಟ್ಟು ಸುಮ್ಮನೆ ಆಗಿ ಬಿಡುತ್ತಾರೆ. ಇದು ಎಷ್ಟು ಡೇಂಜರ್ ಅನ್ನೋದು ಈಗ ಸಂಶೋಧನೆಯಿಂದ ಗೊತ್ತಾಗಿದೆ. ಅದರಲ್ಲೂ ಮಂಗಳೂರು ಭಾಗದಲ್ಲಿಯೇ ಸಾವಿರಾರು ಮಕ್ಕಳು ಕಣ್ಣಿನ ದೋಷದಿಂದ ಬಳಲುತ್ತಿದ್ದಾರೆ.

ಮಂಗಳೂರಿನ ಆರೋಗ್ಯ ಇಲಾಖೆ ಈ ವರದಿಯನ್ನ ರಿಲೀಸ್ ಮಾಡಿದೆ. ಈ ವರದಿಯಲ್ಲಿ ಬರೋಬ್ಬರಿ 4 ಸಾವಿರ ಮಕ್ಕಳು ದೃಷ್ಟಿದೋಷದಿಂದ ಬಳಲುತ್ತಿರುವುದು ವರದಿಯಾಗಿದೆ. ಕೇವಲ ದಕ್ಷಿಣ ಕನ್ನಡ ಒಂದರಲ್ಲಿಯೇ 4 ಸಾವಿರ ಮಕ್ಕಳಿಗೆ ದೋಷ ಕಂಡು ಬಂದಿದ್ದು, 4398 ಮಕ್ಕಳಿಗೆ ಗಂಭಿಒರವಾದ ಸಮಸ್ಯೆ‌ ಕಾಡುತ್ತಿದೆ. 2066 ಮಕ್ಕಳಿಗೆ ಕನ್ನಡಕವನ್ನು ಧರಿಸುವುದು ಅಗತ್ಯವಾಗಿದೆ. ಹೀಗಾಗಿ ಅಲ್ಲಿನ ಮಕ್ಕಳಿಗೆ ಕನ್ನಡಕವನ್ನು ಬರೆದುಕೊಟ್ಟಿದ್ದಾರೆ.

ಆನ್ಲೈನ್ ಕ್ಲಾಸ್ ಅಂತ ಶುರುವಾದ ಮೇಲೆ ಮೊಬೈಲ್ ಅಡಿಕ್ಷನ್ ಹೆಚ್ಚಾಗಿದೆ. ಆದರೆ ಅದೆಷ್ಟು ಡೆಂಜರ್ ಅಂತ ಗೊತ್ತಿದ್ದರು, ಮಕ್ಕಳಾಗಲಿ, ದೊಡ್ಡವರಾಗಲಿ ಮೊಬೈಲ್ ಬಿಟ್ಟು ಇರುವುದೇ ಇಲ್ಲ. ಬರೀ ಕಣ್ಣಿನ ಸಮಸ್ಯೆ ಮಾತ್ರವಲ್ಲ ಜ್ಞಾಪಕ ಶಕ್ತಿಯೂ ಕುಂಠಿತವಾಗುತ್ತದೆ ಅನ್ನೋದನ್ನ ಪೋಷಕರು ಮರೆತಿದ್ದಾರೆ. ಮಕ್ಕಳಿಗೆ ನೆನಪಿನ ಶಕ್ತಿ ವೃದ್ಧಿಯಾಗಲಿ ಅನ್ನೋ ಕಾರಣಕ್ಕೆ ಬಾದಾಮಿ, ಗೋಡಂಬಿ ಅಂತ ಕೊಡ್ತಾರೆ. ಆದ್ರೆ ಇತ್ತ ಮೊಬೈಲ್ ಕೊಟ್ಟು ಅದೆಲ್ಲವನ್ನು ಹಾಳು ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಹೊರ ಬಿದ್ದ ವರದಿಯನ್ನ ನೋಡಿಯಾದರೂ ಪೋಷಕರು ಎಚ್ಚರವಾಗ್ತರಾ ಎಂಬುದನ್ನ ನೋಡಬೇಕಿದೆ.

{}

Post a Comment

0 Comments