SSLC ಫಲಿತಾಂಶ ; ಬಾಲಕಿಯರೇ ಮೇಲುಗೈ

2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ಮಾಮೂಲಿಯಂತೆ ಈ ಬಾರಿಯೂ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ. ಗಂಡು ಮಕ್ಕಳು 58.07% ತೆಗೆದುಕೊಂಡಿದ್ದರೆ ಹೆಣ್ಣು ಮಕ್ಕಳು 74.00% ತೆಗೆದುಕೊಂಡಿದ್ದಾರೆ. ಒಟ್ಟು ಶೇಕಡ 66.14% ರಷ್ಡು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಈ ಬಾರಿ 7 ಲಕ್ಷದ 90 ಸಾವಿರದ 890 ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆದಿದ್ದಾರೆ. ಅದರಲ್ಲಿ 5 ಲಕ್ಷದ 23 ಸಾವಿರದ 075 ಮಕ್ಕಳು ಈ ಬಾರಿ ಪರೀಕ್ಷೆಯನ್ನ ಪಾಸ್ ಮಾಡಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕಗಳನ್ನು ತೆಗೆದು ಉತ್ತೀರ್ಣರಾಗಿದ್ದಾರೆ.

ಸುಮಾರು 75 ಸಾವಿರಕ್ಕೂ ಹೆಚ್ಚಿನ ಮೌಲ್ಯ ಮಾಪಕರು 6 ವಿಷಯಗಳಿಗೆ ಸೇರಿದ 60ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮಾಡಿದ್ದಾರೆ. ಪರೀಕ್ಷೆ ಫಲಿತಾಂಶ ಕಂಡ ಪೋಷಕರು ಹಾಗೂ ಮಕ್ಕಳು ಫುಲ್ ಖುಷಿಯಾಗಿದ್ದಾರೆ.

ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ರೆ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಉಳಿದಂತೆ ಉಡುಪಿ ಸೆಕೆಂಡ್, ಉತ್ತರನ ಕನ್ನಡ ಮೂರನೇ ಸ್ಥಾನ, ಶಿವಮೊಗ್ಗ ನಾಲ್ಕು, ಕೊಡಗು ಐದು, ಹಾಸನ ಆರು, ಶಿರಸಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಮಂಡ್ಯ, ಹಾವೇರಿ, ಕೋಲಾರ, ಮೈಸೂರು, ಬಾಗಲಕೋಟೆ, ಗದಗ, ಧಾರವಾಡ, ವಿಜಯನಗರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ 23ನೇ ಸ್ಥಾನ, ರಾಮನಗರ, ಬೆಳಗಾವಿ, ಚಿಕ್ಕೋಡಿ, ಚಾಮರಾಜನಗರ, ಮಧುಗಿರಿ, ಬಳ್ಳಾರಿ, ಕೊಪ್ಪಳ, ಬೀದರ್, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರಗಿ ಜಿಲ್ಲೆ 35 ಸ್ಥಾನದಲ್ಲಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ