ಒಳ ಮೀಸಲಾತಿ ಜಾತಿ ಗಣತಿ : ಲಂಬಾಣಿ ಎಂದು ಬರೆಸಿ : ಎಂ.ಸತೀಶ್‍ಕುಮಾರ್ ಮನವಿ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 08 : ರಾಜ್ಯ ಸರ್ಕಾರ ಆರಂಭಿಸಿರುವ ಒಳ ಮೀಸಲಾತಿ ಗಣತಿಗೆ ಅಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡುತ್ತಿದ್ದು, ಬಿಳಿ ಹಾಳೆ ಮೇಲೆ ದತ್ತಾಂಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮೊಬೈಲ್ ಆಪ್ ಮೂಲಕ ಗಣತಿಯಾಗಬೇಕೆಂದು ಬಂಜಾರ(ಲಂಬಾಣಿ) ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್ ಒತ್ತಾಯಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಬುಧವಾರ ಬಂಜಾರ(ಲಂಬಾಣಿ) ಜನಾಂಗದ ಸಭೆ ನಡೆಸಿ ಮಾತನಾಡಿದರು.‌ ಒಳ ಮೀಸಲಾತಿ ಸಮೀಕ್ಷೆಗೆ ಆಯೋಗವನ್ನು ಸರ್ಕಾರ ಕಳಿಸಿರುವುದು ಸ್ವಾಗತಾರ್ಹ. ಆದರೆ ಸರ್ವರ್ ಇಲ್ಲ ಎನ್ನುವ ನೆಪ ಹೇಳಿ ಕಾಗದದ ಮೇಲೆ ಮಾಹಿತಿ ಪಡೆದುಕೊಳ್ಳುವುದು ವೈಜ್ಞಾನಿಕ ಕ್ರಮವಲ್ಲ. ತಾಂಡಾಗಳಲ್ಲಿ ಲಂಬಾಣಿ ಜನಾಂಗ ಎಚ್ಚೆತ್ತುಕೊಂಡು ಮೊಬೈಲ್ ಆಪ್ ಮೂಲಕವೇ ಗಣತಿಯಾಬೇಕೆಂದು ಪಟ್ಟು ಹಿಡಿಯಬೇಕೆಂದು ಜಾಗೃತಿಗೊಳಿಸಿದರು.

ತಾಂಡಾಗಳಲ್ಲಿ ಗಣತಿಗೆ ಹೋಗುವ ಅಧಿಕಾರಿಗಳು ದಿಕ್ಕುತಪ್ಪಿಸುತ್ತಿದ್ದಾರೆಂದು ಸಾಕಷ್ಟು ಕರೆಗಳು ಬರುತ್ತಿವೆ. ಸರ್ವರ್ ಇಲ್ಲ ಎಂದು ಯಾವುದೇ ಕಾರಣಕ್ಕೂ ಹೇಳುವಂತಿಲ್ಲ. ಕೂಲಿಗಾಗಿ ವಲಸೆ ಹೋಗಿರುವ ಬಂಜಾರ ಜನಾಂಗ ತಮ್ಮ ತಮ್ಮ ತಾಂಡಾಗಳಿಗೆ ಹಿಂದಿರುಗಿ ಒಳ ಮೀಸಲಾತಿ ಜಾತಿ ಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ನಿಖರವಾದ ಅಂಕಿ ಅಂಶಗಳನ್ನು ನೀಡುವಂತೆ ಎಂ.ಸತೀಶ್‍ಕುಮಾರ್ ವಿನಂತಿಸಿದರು.

ಕದರೇಶ್, ಸಂತೋಷ್, ಗಿರೀಶ್, ಓಂಕಾರ್‍ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಕೂಬ್ಯಾನಾಯ್ಕ, ಪ್ರದೀಪ್ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.

 

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ