ಆಪರೇಷನ್ ಸಿಂಧೂರದ ಮುಂದಾಳತ್ವ ವಹಿಸಿದ್ದ ಇಬ್ಬರು ಹೆಣ್ಣು ಮಕ್ಕಳ ಬಗ್ಗೆ ಗೊತ್ತಾ..?

 

ಇಂದು ಇಡೀ ದೇಶ ಹೆಮ್ಮೆ ಪಡುತ್ತಿದೆ. Tell Modhi ಎಂದವನಿಗೆ‌ I Told Modhi ಎಂದು ಉತ್ತರ ನೀಡಿ ಆಗಿದೆ. ಈ ಉತ್ತರದಿಂದ ಪಾಕಿಸ್ತಾನ ಗಢ ಗಢ ಅಂತ ನಡುಗುತ್ತಿದೆ. ಪಾಕಿಗಳು ಸತ್ತು ಸುಣ್ಣವಾಗುತ್ತಿದ್ದಾರೆ. ಈ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಂದಾಳತ್ವ ವಹಿಸಿಕೊಂಡಿದ್ದರು. ಆ ಹೆಣ್ಣು ಮಕ್ಕಳ ಬಗ್ಗೆ ಇದೀಗ ಇಡೀ ದೇಶ ಗೌರವಿಸುತ್ತಿದೆ. ಜೊತೆಗೆ ಈ ಇಬ್ಬರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಜನರಿಗೆ ಹೆಚ್ಚು ಆಸಕ್ತಿ ಇದೆ. ಅವರೇ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಇವರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಕರ್ನಲ್ ಸೋಫೀಯಾ 1981ರಲ್ಲಿ ಗುಜರಾತ್ ನ ವಡೋದರಾದಲ್ಲಿ ಜನಿಸಿದವರು. ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1999ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆದು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ತವ್ಯಕ್ಕೆ ಸೇರಿದರು. ಖುಷಿಯ ವಿಚಾರ ಏನಂದ್ರೆ ಈ ಖುರೇಷಿ ಅವರು ನಮ್ಮ ಕರ್ನಾಟಕದ ಸೊಸೆ ಅನ್ನೋದು. ಮೂಲಗಳ ಪ್ರಕಾರ ಖುರೇಷಿ ಅವರಿಗೆ ತಿಂಗಳ ವೇತನ ಬಂದು 1,21,200 ರೂಪಾಯಿಯಿಂದ 2,12,400 ರೂವರೆಗೆ ಇರುತ್ತದೆ.

ಮತ್ತೊಂದು ಹೆಸರು ವ್ಯೋಮಿಕಾ ಸಿಂಗ್ 21ನೇ ಶಾರ್ಟ್ ಸರ್ವೀಸ್ ಕಮಿಷನ್ ಫ್ಲೈಯಿಂಗ್ ಪೈಲಟ್ ಕೋರ್ಸ್ ಅಡಿಯಲ್ಲಿ ಡಿಸೆಂಬರ್ 18, 2004ರಂದು ವಾಯುಪಡೆಗೆ ಸೇರಿದರು. ಇಲ್ಲಿಯವರೆಗೆ ಅವರು 2,500 ಗಂಡೆಗೂ ಹೆಚ್ಚು ಕಾಲ ಹಾರಾಟವನ್ನು ಪೂರ್ಣಗೊಳಿಸಿದ್ದಾರೆ. 2017ರಲ್ಲಿ ವಾಯುಪಡೆಯ ಪ್ರಮುಖ ಮತ್ತು ಜವಾಬ್ದಾರಿಯುತ ಶ್ರೇಣಿಯಾದ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲಾಗಿದೆ.



source https://suddione.com/do-you-know-about-the-two-girls-who-led-operation-sindoora/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ