ಕದನ ವಿರಾಮ ಒಪ್ಪಿಕೊಂಡ ಪಾಕ್ ಉಲ್ಲಂಘನೆ ಮಾಡಿದ್ದೇಕೆ..?

ನೆಮ್ಮದಿಯಿಂದ ಕಾಶ್ಮೀರದ ಸೌಂದರ್ಯ ಸವಿಯುತ್ತಿದ್ದ ಹಿಂದೂಗಳ ಮೇಲೆ ಪಾಕಿಸ್ತಾನ್ ಉಗ್ರರು ಬಿಟ್ಟ ಗುಂಡಿನ ದಾಳಿಗೆ ಭಾರತ ತಡಕಿ ನೋಡಿಕೊಳ್ಳುವಂತ ಉತ್ತರ ನೀಡಿದೆ. ತಿನ್ನೋಕು ಗತಿ ಇಲ್ಲದ ಪಾಕಿಸ್ತಾನ ಭಾರತದ ಮುಂದೆ ತಲೆ ಬಾಗಿತ್ತು. ಇದನ್ನ ಇಲ್ಲಿಗೆ ನಿಲ್ಲಿಸುವಂತ ಅಮೆರಿಕಾದ ಬಳಿ ಮನವಿ ಮಾಡಿತ್ತು. ಹೋಗ್ಲಿ ಪಾಪ ಅಂತ ಕದನ ವಿರಾಮ ಘೋಷಿಸಿದ್ರೆ ಹಿಂದೆನೇ ದಾಳಿ ಮಾಡಿ ಮತ್ತೆ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಅಷ್ಟಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದಾದರೂ ಯಾಕೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಕದನ ವಿರಾಮ ಉಲ್ಲಂಘನೆ ಮಾಡುವುದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯ ಹಣಕಾಸು ನಿಧಿ. ಪಾಕಿಸ್ತಾನಕ್ಕೆ ನೀಡುವ 1.2 ಬಿಲಿಯನ್ ಡಾಲರ್ ಸಾಲ. ಪಾಕಿಸ್ತಾನಕ್ಕೆ IMF 19 ಕೋಟಿ ರೂಪಾಯಿ ಸಾಲವನ್ನ ನೀಡಿದೆ. ಈ ಸಾಲ ಬಿಡುಗಡೆಗೆ ಅಮೆರಿಕಾ ಷರತ್ತೊಂದನ್ನ ವಿಧಿಸಿತ್ತು. ಅಂದ್ರೆ ಕದನ ವಿರಾಮ ಘೋಷಣೆ ಮಾಡಿದ್ರೆ ಸಾಲ ನೀಡುವುದಾಗಿ ಅಮೆರಿಕಾ ಹೇಳಿದ್ದ ಬಳಿಕ ಪಾಕಿಸ್ತಾನ ಕದನ ವಿರಾಮ ಘೋಷಣೆ ಮಾಡಿತ್ತು.

ಆದರೆ ಪಾಕಿಸ್ತಾನದ ನಿರ್ಧಾರದ ವಿರುದ್ಧ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ತಿರುಗಿ ಬಿದ್ದಿದ್ದಾರೆ. ಪಾಕಿಸ್ತಾನ ಸರ್ಕಾರ ಕದನ ವಿರಾಮ ಮಾಡಿದ್ರು ಅಸೀಮ್ ಸೂಚನೆಯ ಮೇರೆಗೆ ಪಾಕಿಸ್ತಾನ ಸೇನೆ ದಾಳಿ ಮಾಡಿದೆ. ಡ್ರೋನ್ ದಾಳಿ ನಡೆದಿದೆ. ಹೀಗಾಗಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನದ ಮೇಲೆ ಮರು ದಾಳಿಗೆ ವಿದೇಶಾಂಗ ಸಚಿವರು ಕೂಡ ಸೂಚನೆ ನೀಡಿದ್ದಾರೆ. ಪಾಕಿಸ್ತಾನ ಆರ್ಥಿಕ ನಷ್ಟದಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಆದರೆ ಅಲ್ಲಿನ ಸೇನೆಯೇ ದಾಳಿಗೆ ಮುಂದಾಗಿದ್ದು, ವಿಪರ್ಯಾಸ.



source https://suddione.com/why-did-pakistan-violate-the-ceasefire-agreement/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ