ಚಿತ್ರದುರ್ಗ : ರುದ್ರಮುನಿ ನಿಧನ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 06 : ನಗರದ ಹಳೇ ವೈಶಾಲಿ ನರ್ಸಿಂಗ್ ಹೋಂ ಸಮೀಪದಲ್ಲಿ ವಾಸವಿರುವ ಎಂ. ಟಿ. ರುದ್ರಮುನಿ (71 ವರ್ಷ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಶ್ರೀ ತಿಪ್ಪೇಸ್ವಾಮಿ ಟ್ರಾನ್ಸ್ ಪೋರ್ಟ್ ಮಾಲೀಕ ಮಹಡಿ ತಿಪ್ಪೇಸ್ವಾಮಿ ಅವರ ಜ್ಯೇಷ್ಠ ಪುತ್ರ. ಇವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ತಾಲ್ಲೂಕಿನ ಕ್ಯಾದಿಗೆರೆ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

[Collection]

Post a Comment

0 Comments