
ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಈಗ ಡಿವೋರ್ಸ್ ವಿಚಾರಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಇದೀಗ ಬಾಂಧ್ರಾ ಪ್ಯಾಮಿಲಿ ಕೋರ್ಟ್ ಇಬ್ಬರ ಅರ್ಜಿಯನ್ನು ಪುರಸ್ಕರಿಸಿ, ವಿಚ್ಚೇದನ ಮಂಜೂರು ಮಾಡಿದೆ. ಈ ಮೂಲಕ ಗಾಸಿಪ್ ಸುದ್ದಿ ನಿಜವಾಗಿದೆ.
ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದು, ಇಬ್ಬರು ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಕೋರ್ಟ್ ಗೆ ಕಾರಣ ನೀಡಿ, ಡಿವೋರ್ಸ್ ಪಡೆದಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ಚಹಲ್ ತಮ್ಮ ಮಾಜಿ ಪತ್ನಿ ಧನುಶ್ರೀಗೆ 60 ಕೋಟಿ ಜೀವನಾಂಶ ನೀಡಲು ಒಪ್ಪಿದ್ದಾರೆಂದು ಸುದ್ದಿಯಾಗಿದೆ. ಆದರೆ ಈ ಬಗ್ಗೆ ಇಬ್ಬರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.
2020ರಲ್ಲಿ ಯಜುವೇಂದ್ರ ಚಹಾಲ್ ಹಾಗೂ ಧನುಶ್ರೀ ನಡುವೆ ಲವ್ವಾಗಿತ್ತು. ಆ ವರ್ಷವೇ ಇಬ್ಬರು ಮದುವೆಯನ್ನು ಆದ್ರೂ. ಕಳೆದ ಎರಡು ವರ್ಷದ ಹಿಂದೆಯೇ ಇಬ್ಬರು ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಒಬ್ವರಿಗೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದರು. ಆಗ ಅನುಮಾನ ಇನ್ನು ದಟ್ಟವಾಗಿತ್ತು. ಆದರೆ ಧನುಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚಹಲ್ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿರಲಿಲ್ಲ. ಇದೀಗ ಅಧಿಕೃತವಾಗಿಯೇ ಇಬ್ಬರು ದೂರ ದೂರ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಘೋಷಣೆ ಮಾಡಿಕೊಂಡಿದ್ದಾರೆ. ಇದು ಇಬ್ಬರು ಅಭಿಮಾನಿಗಳಿಗೂ ಬೇಸರ ತರಿಸಿದೆ.
source https://suddione.com/team-india-player-chahal-and-dhanushree-divorce-official-how-many-crores-was-given-as-compensation/
0 Comments
If u have any queries, Please let us know