ಸೂರಿಗಾಗಿ ಸಮರ : ಕಮ್ಯುನಿಸ್ಟ್ ಪಕ್ಷದಿಂದ ಪಿಡಿಒಗಳಿಗೆ ಮನವಿ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 05 : ನಿವೇಶನ ಮತ್ತು ವಸತಿರಹಿತರಿಗೆ ಸೂರಿಗಾಗಿ ಸಮರ ಹೋರಾಟವನ್ನು ಹಮ್ಮಿಕೊಂಡಿದ್ದ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಶನಿವಾರ ಗುಡ್ಡದ ರಂಗವ್ವನಹಳ್ಳಿ ಹಾಗೂ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಠದ ಕುರುಬರಹಟ್ಟಿ ಹಾಗೂ ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಬರುವ ಹಳ್ಳಿಗಳಲ್ಲಿ ಸ್ವಂತ ನಿವೇಶನ ಮತ್ತು ಮನೆಗಳಿಲ್ಲದವರನ್ನು ಗುರುತಿಸಿ ವಸತಿ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ತಾಲ್ಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ಈ.ಸತ್ಯಕೀರ್ತಿ, ಜಿಲ್ಲಾ ಸಹ ಕಾರ್ಯದರ್ಶಿ ಬಿ.ಹೆಚ್.ಹನುಮಂತಪ್ಪ, ಕಟ್ಟಡ ಕಾರ್ಮಿಕರ ಸಂಘದ ಬಾಬು, ರಫಿ, ಶಿವು, ಬಿಸಿಯೂಟದ ಫರ್ವಿನ್‍ತಾಜ್, ಸುವರ್ಣಮ್ಮ, ನಿವೇಶನ ವಸತಿ ರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

[Collection]

Post a Comment

0 Comments