ಇಸ್ರೋದಿಂದ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

ಚಿತ್ರದುರ್ಗ: ಇಸ್ರೋದಿಂದ ಇಂದು ಮತ್ತೊಂದು ಪ್ರಯೋಗ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಎಲ್ ಎಕ್ಸ್ ನ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ.

ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲಿರುವ ಎಟಿಆರ್ ನಲ್ಲಿ ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ.

https://x.com/ISROSight/status/1804694291199008991?t=lYWopM2VW5e-TKU6JbOASQ&s=19

ದೃಶ್ಯಗಳಲ್ಲಿ ಆರ್ ಎಲ್ ವಿ ಆಕಾಶದಿಂದ ಶರವೇಗದಲ್ಲಿ ಹಾರುತ್ತಾ ಬಂದು ಕುದಾಪುರದ ಎಟಿಎಸ್ ನಲ್ಲಿ ಲ್ಯಾಂಡ್ ಆಗುತ್ತಿರುವ ದೃಶ್ಯ ಮೈ ನವಿರೇಳಿಸುತ್ತದೆ. ಈ ಯೋಜನೆ ಯಶಸ್ವಿಯಾಗಿದ್ದಕ್ಕೆ ಚಿತ್ರದುರ್ಗದ ಮಂದಿಯೂ ಖುಷಿಯಾಗಿದ್ದಾರೆ.

The post ಇಸ್ರೋದಿಂದ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ first appeared on Kannada News | suddione.



source https://suddione.com/isros-final-landing-experiment-successful/

Post a Comment

0 Comments