ಚಿತ್ರದುರ್ಗದ ಉದ್ದಿಮೆದಾರರಿಗೆ ಪ್ರಮುಖ ಸೂಚನೆ : ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ನಿಯಮ ಮೀರಿದರೆ ಪರವಾನಿಗೆ ರದ್ದು : ಪೌರಾಯುಕ್ತೆ ಎಂ.ರೇಣುಕಾ

ಸುದ್ದಿಒನ್, ಚಿತ್ರದುರ್ಗ .ಜ.09: ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸುವುದು ಕಡ್ಡಾಯವಾಗಿದೆ. ನಿಯಮ ಮೀರಿದವರ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ನಿರ್ಧಾಕ್ಷಿಣ್ಯವಾಗಿ ಉದ್ದಿಮೆಗಳನ್ನು ಮುಚ್ಚಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೂಚನೆ ನೀಡಿದ್ದಾರೆ.

ನಗರಸಭೆಯಿಂದ 3000ಕ್ಕೂ ಅಧಿಕ ವಿವಿಧ ಬಗೆಯ ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಉದ್ದಿಮೆಗಳು, ಅಂಗಡಿ ಹಾಗೂ ವಾಣಿಜ್ಯ ವ್ಯಾಪಾರ ಸಂಸ್ಥೆಗಳು ತಮ್ಮ ನಾಮಫಲಕದಲ್ಲಿ ಪ್ರಧಾನವಾಗಿ ಮೇಲ್ಪಂತಿಯಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಬರೆಯಿಸಬೇಕು ಎಂದು ಷರತ್ತು ವಿಧಿಸಿ ಪರವಾನಿಗೆಯನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಹಾಗೂ ಜನಸಾಮಾನ್ಯರ ಭಾಷೆಯಾಗಿದೆ. ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ತಿಳಿಯುವಂತೆ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ವರ್ತಕರು ಆಧಾರ್ ಕಾರ್ಡ್ ಮತ್ತು ಬಾಡಿಗೆ ಕಾರಾರು ಪತ್ರ ನೀಡಿ ಕಡ್ಡಾಯವಾಗಿ 5 ವರ್ಷದ ಅವಧಿಗೆ ಉದ್ದಿಮೆ ಪರವಾನಿಗೆ ಪಡೆಯಬೇಕು. ಪರವಾನಿಗೆ ಅವಧಿ ಮುಗಿದವರು ತಕ್ಷಣವೇ ನಿಗಧಿತ ಶುಲ್ಕ ಪಾವತಿಸಿ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕು ಎಂದು ಪೌರಾಯುಕ್ತೆ ಎಂ.ರೇಣುಕಾ ಕೋರಿದ್ದಾರೆ.

The post ಚಿತ್ರದುರ್ಗದ ಉದ್ದಿಮೆದಾರರಿಗೆ ಪ್ರಮುಖ ಸೂಚನೆ : ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ನಿಯಮ ಮೀರಿದರೆ ಪರವಾನಿಗೆ ರದ್ದು : ಪೌರಾಯುಕ್ತೆ ಎಂ.ರೇಣುಕಾ first appeared on Kannada News | suddione.

[Collection]

Post a Comment

0 Comments