ಅಷ್ಟಕ್ಕೂ 31 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ನಡೆದದ್ದು ಏನು..?

 

ಹುಬ್ಬಳ್ಳಿ: ರಾಮಮಂದಿರದ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿತ್ತು. ಈ ಗಲಾಟೆ ಸಂಬಂಧ ಈಗ ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಆರ್ ಎಸ್ ಎಸ್ ನಾಯಕರು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಅಂದು ಹುಬ್ಬಳ್ಳಿಯಲ್ಲಿ ಅಂದು ಆಗಿದ್ದಾದರೂ ಏನು ಗೊತ್ತಾ..?

ಹುಬ್ಬಳ್ಳಿಯಲ್ಲಿ ಅಂದು 1992 ಡಿಸೆಂಬರ್ 5 ರಂದು ನಗರದಲ್ಲಿ ವಾತಾವರಣ ಭುಗಿಲೆದ್ದಿತ್ತು. ಡಿಸೆಂಬರ್ 6 ರಂದು ಕರಸೇವೆಗೂ ಮುನ್ನ ನಗರದಲ್ಲಿ ಗಲಭೆ ಎದ್ದಿತ್ತು. ಇಡೀ ದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿತ್ತು. ವಿಐಪಿ, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಈ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಸಾರ್ವಜನಿಕರ ಆಸ್ತಿ – ಪಾಸ್ತಿಗೆ ನಷ್ಟ ಮಾಡುವಂತ ಘಟನೆಗಳು ನಡೆದಿವೆ. ಘಟನೆ ಸಂಬಂಧ ಅಂದು 9 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಇಲ್ಲಿಯವರೆಗೂ ಪೆಂಡಿಂಗ್ ಉಳಿದಿತ್ತು.

ಆರೋಪಿಗಳಾದ ರಾಜು, ಅಶೋಕ್ ಕಲಬುರಗಿ, ಗುರುನಾಥ ಕಾಟಗಾರ್, ರಾಮಚಂದ್ರ ಕಲಬುರಗಿ, ಮೃತ ಕಲಬುರಗಿ ಸೇರಿದಂತೆ ಹಲವರ ಹುಡುಕಾಟಕ್ಕೆ ಪೊಲೀಸರು ಶುರು ಮಾಡುತ್ತಾರೆ. ಇದೀಗ ಆ ಕೇಸಿಗೆ ಸಂಬಂಧಪಟ್ಟಂತೆ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ರಾಮ ಮಂದಿರ ಉದ್ಘಾಟನೆಯ ಹೊತ್ತಲ್ಲಿಯೇ ಈ ರೀತಿ ಬಂಧಿಸಿದ್ದನ್ನು ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ಹೋರಾಟದ ಎಚ್ಚರಿಕೆನ್ನು ನೀಡಿದ್ದಾರೆ.

The post ಅಷ್ಟಕ್ಕೂ 31 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ನಡೆದದ್ದು ಏನು..? first appeared on Kannada News | suddione.

[Collection]

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ