ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗುತ್ತಾ..? ಏನಾಗ್ತಿದೆ ಕಾಂಗ್ರೆಸ್ ನಲ್ಲಿ

 

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇದರ ನಡುವೆಯೇ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಹೊಸ ಅಪ್ಡೇಟ್ ಆಗ್ತಾ ಇದೆ. ಅದರಲ್ಲೂ ಸಚಿವ ಸಂಪುಟ ಪುನಾರಚನೆ ವಿಚಾರ ಸದ್ದು ಮಾಡುತ್ತಿದೆ. ಚುನಾವಣೆ ಬೆನ್ನಲ್ಲೇ ಈ ರೀತಿಯ ವಿಚಾರ ಪ್ಲಸ್ ಪಾಯಿಂಟ್ ಆಗಬಹುದು ಕೂಡ.

ಸಿದ್ದರಾಮಯ್ಯ ಸಂಪುಟದಲ್ಲಿ ಈಗಾಗಲೇ ಸಚಿವ ಸ್ಥಾನಗಳು ಫುಲ್ ಫಿಲ್ ಆಗಿದೆ. ಆದರೆ ಹಲವರು ಸಚಿವಕಾಂಕ್ಷಿಗಳಾಗಿದ್ದರು. ಹೀಗಾಗಿ ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿದ್ದರು. ಇದರ ಬೆನ್ನಲ್ಲೇ ಪಕ್ಷದವರ ವಿರುದ್ಧ, ಸಿಎಂ ವಿರುದ್ಧ ನಡೆರವಾಗಿ ವಾಗ್ದಾಳಿ ನಡೆಸುವುದಕ್ಕೆ ಆರಂಭಿಸಿದರು. ಇದು ಪಕ್ಷಕ್ಕೂ ಮುಜುಗರವನ್ನುಂಟು ಮಾಡಿದೆ.

ಹೀಗಾಗಿ ಅಸಮಾಧಾನ ಶಮನ ಮಾಡುವ ಯೋಜನೆಯೂ ಇದಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಆಗಿದೆ. ಈ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಆಗಲಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರಿಗೆ ಆಪ್ತವಾಗಿರುವ ದಿನೇಶ್ ಗುಂಡೂರಾವ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕೆಲವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಎಲ್ಲರಿಗೂ ಸಿಗಬೇಕು ಅಲ್ಲವ ಎಂದಿದ್ದಾರೆ. ಇದರ ನಡುವೆ ಸಚುವ ಜಮೀರ್ ಅಹ್ಮದ್ ಕೂಡ ಶಿವಲಿಂಗೇಗೌಡ ಸಚಿವರಾಗ್ತಾರೆ ಎಂದಿದ್ದಾರೆ. ಈ ಇಬ್ಬರ ಹೇಳಿಕೆಯಿಂದ ಸಂಪುಟ‌ ಪುನಾರಚನೆ ಖಚಿತ ಎನ್ನಲಾಗುತ್ತಿದೆ.

The post ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ ಆಗುತ್ತಾ..? ಏನಾಗ್ತಿದೆ ಕಾಂಗ್ರೆಸ್ ನಲ್ಲಿ first appeared on Kannada News | suddione.

[Collection]

Post a Comment

0 Comments