ಆಪರೇಷನ್ ಕಮಲದ ವಿರುದ್ಧ ತನಿಖೆ ನಡೆಸಲು ತೆಲಂಗಾಣ ಹೈಕೋರ್ಟ್ ಒಪ್ಪಿಗೆ

ಇತ್ತಿಚೆಗೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡಿದ್ದರು. ನಮ್ಮ ನಾಲ್ವರು ಶಾಸಕರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ದಲ್ಲಾಳಿಗಳನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕೆ ಸಂಬಂಧಿಸಿದಂತ ಆಡಿಯೋ, ವಿಡಿಯೋ ರಿಲೀಸ್ ಮಾಡಲಾಗಿತ್ತು. ಇದೀಗ ತೆಲಂಗಾಣ ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ಅನುಮತಿ ನೀಡಿದೆ.

ಆಪರೇಷನ್ ಕಮಲದ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಇದು ಮುಖ್ಯಮಂತ್ರಿ ಅವರದ್ದೇ ಚಿತ್ರಕಥೆ, ನಿರ್ದೇಶನ, ನಿರ್ಮಾಣದ ನಾಟ ಎಂದಿದ್ದರು. ಇದೀಗ ತೆಲಂಗಾಣ ಪೊಲೀಸರಿಗೆ ಇದರ ತನಿಖೆ ಮುಂದುವರೆಸಬಹುದು ಎಂದು ಅನುಮತಿ ನೀಡಿದೆ.

ಕೆಸಿಆರ್ ಇತ್ತಿಚೆಗೆ ರಾಷ್ಟ್ರ ಮಟ್ಟದ ಪಕ್ಷವನ್ನು ಅನೌನ್ಸ್ ಮಾಡಿದ್ದಾರೆ. ಮುಂದಿನ ಚುನಾವಣೆಗೆ ತಮ್ಮ ಭಾರತ್ ರಾಷ್ಟ್ರ ಸಮಿತಿ ಮೂಲಕ ಚುನಾವಣೆಗೆ ಬರಲಿದ್ದಾರೆ. ಪಕ್ಷ ಘೋಷಣೆಯ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಹೋಗಿದ್ದರು.

The post ಆಪರೇಷನ್ ಕಮಲದ ವಿರುದ್ಧ ತನಿಖೆ ನಡೆಸಲು ತೆಲಂಗಾಣ ಹೈಕೋರ್ಟ್ ಒಪ್ಪಿಗೆ first appeared on Kannada News | suddione.



source https://suddione.com/mlas-poaching-case-telangana-hc-lifts-stay-on-police-investigation/

Post a Comment

0 Comments