ಈ ಸಮಯದಲ್ಲಿ ಹೆಚ್ಚು ಸೇವಿಸಿ ಚ್ಯಾವಣ್ ಪ್ರಾಶ್’ ಆದ್ರೆ ಮನೆಯಲ್ಲೇ ಟ್ರೈ ಮಾಡಿ

ಚ್ಯಾವಣ್ ಪ್ರಾಶ್ ಬಗ್ಗೆ ಎಲ್ರು ಕೇಳಿಯೇ ಇರ್ತಾರೆ. ರೋಗ ನಿರೋಧಕ ಹೆಚ್ಚಿಸಕೊಳ್ಳೋದಕ್ಕೆ ಚ್ಯಾವಣ್ ಪ್ರಾಶ್ ಬಲು ಉಪಯೋಗಕಾರಿ. ಉತ್ತಮ ಪರಿಣಾಮ ಕೂಡ ಬೀರುತ್ತೆ. ಆದ್ರೆ ಹೊರಗಡೆ ಎಲ್ಲೋ ತರುವ ಬದಲಿಗೆ ಮನೆಯಲ್ಲೇ ಇದನ್ನ ಟ್ರೈ ಮಾಡಬಹುದು.

ನೆಲ್ಲಿಕಾಯಿ-1/2 ಕೆಜಿ, ಒಣ ದ್ರಾಕ್ಷಿ- ಒಂದು ಹಿಡಿ, ಖರ್ಜೂರ (ಬೀಜ ತೆಗೆದು)-ಹತ್ತು, ದೇಶೀಯ ತುಪ್ಪ-100 ಗ್ರಾಂ, ಬೆಲ್ಲ-400 ಗ್ರಾಂ, ಕರಿಬೇವಿನ ಎಲೆ- 2 ಎಲೆಗಳು, ದಾಲ್ಚಿನಿ-1 ಸಣ್ಣ ತುಂಡು, ಒಣ ಶುಂಠಿ-10 ಗ್ರಾ, ಜಾಯಿಕಾಯಿ ಹುಡಿ-5 ಗ್ರಾಂ, ಹಸಿರು, ಏಲಕ್ಕಿ(ಸಣ್ಣದು)-7-8, ಲವಂಗ-5 ಗ್ರಾಂ, ಕರಿ ಮೆಣಸು-5 ಗ್ರಾಂ, ಕೇಸರಿ-ಚಿಟಿಕೆಯಷ್ಟು, ಜೀರಿಗೆ-1 ಚಮಚ, ಪಿಪ್ಪಾಲಿ-10 ಗ್ರಾಂ(ಸುಲಭವಾಗಿ ಮಿಶ್ರಣವಾದರೆ), ಚಕ್ರಫಲ-1 ತುಂಡು ರೆಡಿ ಮಾಡಿಕೊಳ್ಳಿ. ಆನಂತರ

ಒಣ ಸಾಂಬಾರ(ಕರಿಬೇವು, ದಾಲ್ಚಿನಿ, ಒಣ ಶುಂಠಿ, ಜಾಯಿಕಾಯಿ, ಏಲಕ್ಕಿ, ಲವಂಗ, ಜೀರಿಗೆ, ಪಿಪ್ಪಾಲಿ, ಚಕ್ರಫಲ ಇತ್ಯಾದಿ)ಗಳನ್ನು ಸರಿಯಾಗಿ ರುಬ್ಬಿ ಹುಡಿ ಮಾಡಿಕೊಳ್ಳಿ. ನೆಲ್ಲಿಕಾಯಿಯನ್ನು ಸರಿಯಾಗಿ ತೊಳೆದುಕೊಂಡು ಅದನ್ನು ಸ್ವಚ್ಛ ಮಾಡಿದ ಬಳಿಕ ಕುಕ್ಕರ್ ನಲ್ಲಿ ಎರಡು ವಿಸಿಲ್ ಬರಲಿ. ನೆಲ್ಲಿಕಾಯಿಯನ್ನು ನೀರಿನಿಂದ ತೆಗೆದು ಬದಿಗೆ ಇಟ್ಟುಬಿಡಿ. ಬಿಸಿ ನೀರಿಗೆ ಒಣ ದ್ರಾಕ್ಷಿ ಮತ್ತು ಖರ್ಜೂರ ಹಾಕಿ ಮತ್ತು ಹಾಗೆ ಹತ್ತು ನಿಮಿಷ ಕಾಲ ಮುಚ್ಚಳ ಮುಚ್ಚಿಡಿ. ನೆಲ್ಲಿಕಾಯಿಯು ತಂಪಾದ ಬಳಿಕ ಅದನ್ನು ಕತ್ತರಿಸಿ ಬೀಜ ತೆಗೆಯಿರಿ. ನೆಲ್ಲಿಕಾಯಿ, ಒಣದ್ರಾಕ್ಷಿ ಮತ್ತು ಖರ್ಜೂರವನ್ನು ನೀವು ಮಿಕ್ಸರ್ ಗೆ ಹಾಕಿಕೊಳ್ಳಿ. ದ್ರಾಕ್ಷಿ ಮತ್ತು ಖರ್ಜೂರ ಹಾಕಿದಂತಹ ನೀರನ್ನು ಇದಕ್ಕೆ ಸ್ವಲ್ಪ ಹಾಕಿ ರುಬ್ಬಿಕೊಳ್ಳಿ. ಮೆತ್ತಗಿನ ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ. ದೇಶೀಯ ತುಪ್ಪವನ್ನು ತವಾಗೆ ಹಾಕಿ ಹತ್ತು ನಿಮಿಷ ಕುದಿಸಿ. ಬಳಿಕ ಬೆಲ್ಲವನ್ನು ಇದೇ ತುಪ್ಪಕ್ಕೆ ಹಾಕಿ, ನೆಲ್ಲಿಕಾಯಿ ಮತ್ತು ಖರ್ಜೂರದ ಪೇಸ್ಟ್ ನ್ನು ಇದಕ್ಕೆ ಹಾಕಿ ತಿರುಗಿಸಿ. ಹದ ಬೆಂಕಿಯಲ್ಲಿ ನೀವು ಇದನ್ನು ಸರಿಯಾಗಿ ತಿರುಗಿಸುತ್ತಾ ಕುದಿಸಿ. ಮನೆಯಲ್ಲೇ ಮಾಡಿದ ಚ್ಯಾವಣ್ ಪ್ರ್ಯಾಶ್ ರೆಡಿ. ತಿಂದು ರೋಗನಿರೋಧಕ‌ಶಕ್ತಿ ವೃದ್ಧಿಸಿಕೊಳ್ಳಿ.

ಕೊರೊನಾ ಸಮಯದಲ್ಲಿ ರೋಗನಿರೋಧಕ ಶಕ್ತಿಗೆ ಹೆಚ್ಚಿಗೆ ಆಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವೈರಸ್ ಕಾಟದಿಂದ ತಪ್ಪಿಸಿಕೊಳ್ಳೋದಕ್ಕೆ ಚಾವಣ್ ಪ್ರ್ಯಾಶ್ ತುಂಬಾ ಉಪಯೋಗಕಾರಿ.

Post a Comment

0 Comments