
ವಾಷಿಂಗ್ಟನ್/ಟೆಹ್ರಾನ್: ದೀರ್ಘಕಾಲದ ಸಂಘರ್ಷಕ್ಕೆ ಅಂತ್ಯಹಾಡುವ ನಿಟ್ಟಿನಲ್ಲಿ ಅಮೆರಿಕ (ಯುಎಸ್) ಮತ್ತು ಇರಾನ್ ಅಧ್ಯಕ್ಷರು ಆರಂಭಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ.
ಫ್ರಾನ್ಸ್ ನ ಎವಿಯನ್-ಲೆಸ್-ಬೈನ್ಸ್ ರೆಸಾರ್ಟ್ ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಈ ಮಹತ್ವದ ದಾಖಲೆಗೆ ಬುಧವಾರ ಸಹಿ ಹಾಕಿದ್ದಾರೆ ಎಂದು ಎರಡೂ ದೇಶಗಳು ದೃಢಪಡಿಸಿವೆ.
ಹಾರ್ಮುಜ್ ಜಲಸಂಧಿ ಮುಕ್ತ ಮುಕ್ತ: ಇರಾನ್ ವಿಧಿಸಿದ್ದ ದಿಗ್ಬಂಧನ ತೆರವುಗೊಂಡು, ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ‘ಸ್ಟ್ರೇಟ್ ಆಫ್ ಹಾರ್ಮುಜ್’ (Strait of Hormuz) ಮರುಪ್ರಾರಂಭಗೊಳ್ಳಲಿದೆ.ಇರಾನ್‌ನ ಮರುನಿರ್ಮಾಣಕ್ಕಾಗಿ $೩೦೦ ಬಿಲಿಯನ್ (ಸುಮಾರು £೨೨೪ ಬಿಲಿಯನ್) ಯೋಜನೆಯನ್ನು ರೂಪಿಸಲಾಗಿದೆ.
ಇರಾನ್ ಮೇಲಿನ ಎಲ್ಲಾ ರೀತಿಯ ನಿರ್ಬಂಧಗಳನ್ನು” ಕೊನೆಗೊಳಿಸಲು ಅಮೆರಿಕ ಒಪ್ಪಿಕೊಂಡಿದೆ. ಯುದ್ಧಕ್ಕೆ ಮುಖ್ಯ ಕಾರಣವಾಗಿದ್ದ ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮುಂದಿನ ೬೦ ದಿನಗಳ ಅವಧಿಯಲ್ಲಿ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ.ಜಾಗತಿಕ ಆರ್ಥಿಕ ಕುಸಿತವನ್ನು ತಪ್ಪಿಸಲು ಈ ನಿರ್ಧಾರ ಅತ್ಯಗತ್ಯವಾಗಿತ್ತು ಎಂದು ಡೊನಾಲ್ಡ್ ಟ್ರಂಪ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ಯುದ್ಧ ಮುಂದುವರಿದಿದ್ದರೆ ಜಾಗತಿಕವಾಗಿ ತೀವ್ರ ಆರ್ಥಿಕ ಕುಸಿತ ಉಂಟಾಗುತ್ತಿತ್ತು. ನಾವು ಶಾಂತಿಯ ಬಗ್ಗೆ ಮಾತನಾಡಿದಾಗಲೆಲ್ಲಾ ಶೇರು ಮಾರುಕಟ್ಟೆ ರಾಕೆಟ್‌ನಂತೆ ಚಿಮ್ಮುತ್ತಿತ್ತು, ನೆಗೆಟಿವ್ ಆಗಿ ಮಾತನಾಡಿದಾಗ ಕುಸಿಯುತ್ತಿತ್ತು. ಆದರೆ, ಒಂದು ವೇಳೆ ಅಂತಿಮ ಒಪ್ಪಂದ ಏರ್ಪಡದಿದ್ದರೆ ಇರಾನ್ ಮೇಲೆ ಭೀಕರವಾಗಿ ಬಾಂಬ್ ದಾಳಿ ನಡೆಸಲಾಗುವುದು,” ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಅಧ್ಯಕ್ಷರು ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಅಲ್ಲಿನ ಸಂಸತ್ತಿನ ಸ್ಪೀಕರ್ ಹಾಗೂ ಪ್ರಮುಖ ಸಂಧಾನಕಾರ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅಮೆರಿಕದ ಮೇಲಿನ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.ನಮ್ಮ ಬೆರಳು ಇನ್ನೂ ಟ್ರಿಗರ್ ಮೇಲೆಯೇ ಇದೆ. ಶತ್ರುಗಳಿಗೆ ತರ್ಕದ ಭಾಷೆ ಅರ್ಥವಾಗದಿದ್ದರೆ, ನಾವು ಮತ್ತೆ ಶಕ್ತಿಯ ಭಾಷೆಯಲ್ಲೇ ಉತ್ತರಿಸಲಿದ್ದೇವೆ,” ಎಂದು ಇರಾನ್ ಸರ್ಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಫೆಬ್ರವರಿ ೨೮ ರಂದು ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಘೋಷಿಸಿದ್ದವು. ಯುದ್ಧದ ಮೊದಲ ದಿನವೇ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇರಾನ್, ವಿಶ್ವದ ಶೇ. ೨೦ ರಷ್ಟು ತೈಲ ಮತ್ತು ಎಲ್‌ಎನ್‌ಜಿ (LNG) ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತ್ತು. ಇದರಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿ, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈಗಿನ ಒಪ್ಪಂದ ಜಾಗತಿಕ ಮಾರುಕಟ್ಟೆಗೆ ನಿರಾಳತೆ ತಂದಿದೆ.










source https://suddione.com/us-iran-sign-historic-deal-to-end-war/

0 Comments
If u have any queries, Please let us know