ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪ: ಕನಿಷ್ಠ ಐದು ಸಾವು, ಸುನಾಮಿ ಮುನ್ನೆಚ್ಚರಿಕೆ!

ಮನಿಲಾ (ಫಿಲಿಪೈನ್ಸ್): ದಕ್ಷಿಣ ಫಿಲಿಪೈನ್ಸ್ನ ಮಿಂಡನಾವೊ ದ್ವೀಪದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜನರಲ್ ಸ್ಯಾಂಟೋಸ್ ನಗರದ ವಿಪತ್ತು ನಿರ್ವಹಣಾ ಮುಖ್ಯಸ್ಥ ಅಗ್ರಿಪಿನೋ ಡಾಸೆರಾ ಅವರು, ಸಾವುನೋವುಗಳು ಮತ್ತು ಹಾನಿಯ ನಿಖರ ಪ್ರಮಾಣವನ್ನು ಅಧಿಕಾರಿಗಳು ಇನ್ನು ಜರಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿ ತಕ್ಷಣದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಫಿಲಿಪೈನ್ಸ್ ಸುದ್ದಿ ಸಂಸ್ಥೆ (PNA) ಪ್ರಕಾರ, ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆ (DSWD) ಕಾರ್ಯದರ್ಶಿ ರೆಕ್ಸ್ ಗಚಾಲಿಯನ್ ಅವರು ಸ್ಥಳೀಯ ಸಂಸ್ಥೆಗಳೊಂದಿಗೆ ತಕ್ಷಣದ ಸಮನ್ವಯಕ್ಕೆ ಆದೇಶಿಸಿದ್ದಾರೆ. ಮಿಂಡನಾವೊದಲ್ಲಿ ಸಂತ್ರಸ್ತ ಕುಟುಂಬಗಳಿಗಾಗಿ ೧೧ ಲಕ್ಷಕ್ಕೂ ಹೆಚ್ಚು ಆಹಾರದ ಪ್ಯಾಕೆಟ್ಗಳನ್ನು (FFPs) ಸಿದ್ಧವಾಗಿಡಲಾಗಿದೆ.

“ಸಂತ್ರಸ್ತ ಕುಟುಂಬಗಳ ಅಗತ್ಯತೆಗಳನ್ನು ಪೂರೈಸಲು DSWD ಸಂಪೂರ್ಣವಾಗಿ ಸಿದ್ಧವಾಗಿದೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಂದಿಗೆ ಕೈಜೋಡಿಸಲು ಮತ್ತು ನಿರಾಶ್ರಿತರ ಶಿಬಿರಗಳಲ್ಲಿ ನೆರವಾಗಲು ಎಲ್ಲಾ ಕ್ಷೇತ್ರ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಗಚಾಲಿಯನ್ ತಿಳಿಸಿದ್ದಾರೆ. ಅಲ್ಲದೆ, ಮೊಬೈಲ್ ಕಮಾಂಡ್ ಸೆಂಟರ್ಗಳು ಮತ್ತು ಮೊಬೈಲ್ ಅಡುಗೆಮನೆಗಳನ್ನು ನಿಯೋಜಿಸಲು ಆದೇಶಿಸಲಾಗಿದೆ.



source https://suddione.com/strong-earthquake-in-the-philippines-at-least-five-dead-tsunami-warning-issued/

Post a Comment

0 Comments