
ಸುದ್ದಿಒನ್,ಮುಂಬೈ,ಮೇ.30: ಜನತೆಗೆ ವೀಕೆಂಡ್‌ನಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂಧನ ಮತ್ತು ಅಡುಗೆ ಅನಿಲದ ದರವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗಿದೆ. ಮಹಾನಗರ ಗ್ಯಾಸ್ ಲಿಮಿಟೆಡ್ (MGL) ಶನಿವಾರದಿಂದಲೇ ಜಾರಿಗೆ ಬರುವಂತೆ ಸಿಎನ್‌ಜಿ (CNG) ಮತ್ತು ಪೈಪ್ಡ್ ನೈಸರ್ಗಿಕ ಅನಿಲ (PNG) ದರವನ್ನು ಪರಿಷ್ಕರಿಸಿದೆ.
ಸಂಕುಚಿತ ನೈಸರ್ಗಿಕ ಅನಿಲ (CNG) ದರದಲ್ಲಿ ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಇದುವರೆಗೆ ಪ್ರತಿ ಕೆಜಿಗೆ 84 ರೂಪಾಯಿ ಇದ್ದ ಸಿಎನ್‌ಜಿ ಬೆಲೆ ಈಗ 86 ರೂಪಾಯಿ ತಲುಪಿದೆ.ಈ ಬೆಲೆ ಏರಿಕೆಯು ಮುಂಬೈ, ಥಾಣೆ, ನವಿ ಮುಂಬೈ ಭಾಗದ ಲಕ್ಷಾಂತರ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಬಸ್ ಚಾಲಕರ ಮೇಲೆ ನೇರ ಪರಿಣಾಮ ಬೀರಲಿದೆ. ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆ ವೆಚ್ಚ ಹಾಗೂ ದೈನಂದಿನ ಪ್ರಯಾಣ ದರವೂ ದುಬಾರಿಯಾಗುವ ಸಾಧ್ಯತೆಯಿದೆ.
ಗೃಹಿಣಿಯರಿಗೂ ತಟ್ಟಿದ ಬಿಸಿ: ಮನೆ ಬಳಕೆಯ ಗ್ಯಾಸ್ ದರವೂ ಏರಿಕೆ
ಕೇವಲ ವಾಹನ ಇಂಧನ ಮಾತ್ರವಲ್ಲದೆ, ಮನೆಗಳಲ್ಲಿ ಬಳಸುವ ಪೈಪ್ಡ್ ಅಡುಗೆ ಅನಿಲದ (PNG) ದರವನ್ನು ಕೂಡ ಹೆಚ್ಚಿಸಲಾಗಿದೆ. ಪ್ರತಿ ಎಸ್‌ಸಿಎಂ (ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್) ಗೆ 50 ಪೈಸೆ ಏರಿಕೆ ಮಾಡಲಾಗಿದ್ದು, ಹೊಸ ದರವು ಪ್ರತಿ ಯೂನಿಟ್‌ಗೆ 52 ರೂಪಾಯಿ ಆಗಲಿದೆ.












source https://suddione.com/another-shock-for-the-common-man-cng-png-gas-prices-rise-suddenly/

0 Comments
If u have any queries, Please let us know