BREAKING : ಕೇರಳಂ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ವಿ.ಡಿ ಸತಿಸನ್ ಆಯ್ಕೆ

ಸುದ್ದಿಒನ್,ತಿರುವನಂತಪುರಂ,ಮೇ.14: ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಅಂತಿಮವಾಗಿ ಸುಖಾಂತ್ಯ ಕಂಡಿದೆ. ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ವಿ.ಡಿ. ಸತೀಶನ್ ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಹಲವು ದಿನಗಳ ಕಾಲ ನಡೆದ ರಾಜಕೀಯ ಬಿಕ್ಕಟ್ಟಿಗೆ ತೆರೆ ಬಿದ್ದಿದ್ದು, ಕೇರಳ ಕಾಂಗ್ರೆಸ್‌ನಲ್ಲಿ ಹೊಸ ಪರ್ವ ಆರಂಭವಾದಂತಾಗಿದೆ.

ದೆಹಲಿಯಲ್ಲಿ ಇಂದು ಎಐಸಿಸಿ (AICC) ವೀಕ್ಷಕರು ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಜಯ್ ಮೇಕನ್, ಮುಕುಲ್ ವಾಸ್ನಿಕ್ ಮತ್ತು ಕೇರಳ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಶಾಸಕಾಂಗ ಪಕ್ಷದ ಬಹುಮತದ ಅಭಿಪ್ರಾಯದಂತೆ ಸತೀಶನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಿಎಂ ಗಾದಿಗಾಗಿ ಕೇರಳ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರಾಜ್ಯದ ಶಾಸಕರ ಅಭಿಪ್ರಾಯ ಸಂಗ್ರಹಿಸಲು ದೆಹಲಿಯಿಂದ ಆಗಮಿಸಿದ್ದ ವೀಕ್ಷಕರು, ಪ್ರತಿಯೊಬ್ಬ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಗೌಪ್ಯ ಮತದಾನದ ಮಾದರಿಯಲ್ಲಿ ಮಾಹಿತಿ ಪಡೆದಿದ್ದರು. ಅಂತಿಮ ಹಂತದವರೆಗೂ ಕುತೂಹಲ ಮೂಡಿಸಿದ್ದ ಈ “ರಾಜಕೀಯ ಕ್ಲೈಮಾಕ್ಸ್”ನಲ್ಲಿ, ಯುವ ಸಮೂಹ ಮತ್ತು ಹಿರಿಯ ನಾಯಕರ ಸಮತೋಲಿತ ಬೆಂಬಲ ಗಳಿಸುವಲ್ಲಿ ಸತೀಶನ್ ಯಶಸ್ವಿಯಾಗಿದ್ದಾರೆ.



source https://suddione.com/breaking-vd-satheesan-elected-as-new-kerala-chief-minister/

Post a Comment

0 Comments