
ಸುದ್ದಿಒನ್,ನವದೆಹಲಿ,ಮೇ.18: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ.ಜಾಗತಿಕ ಮಾರುಕಟ್ಟೆಯ ಏರಿಳಿತದ ಹಿನ್ನೆಲೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
24 ಕ್ಯಾರೆಟ್ ಶುದ್ಧ ಚಿನ್ನ, 10 ಗ್ರಾಂ ಬೆಲೆ ರೂ. 710 ಇಳಿಕೆಯಾಗಿದ್ದು, ಪ್ರಸ್ತುತ ರೂ. 1,56,220 ದಾಖಲಾಗಿದೆ. 1 ಗ್ರಾಂ ಬೆಲೆ ರೂ. 71 ಇಳಿಕೆಯಾಗಿ ರೂ. 15,622 ತಲುಪಿದೆ. 22 ಕ್ಯಾರೆಟ್ ಒಡವೆ ಚಿನ್ನ, 10 ಗ್ರಾಂ ಬೆಲೆ ರೂ. 650 ಇಳಿಕೆಯಾಗಿದ್ದು, ಪ್ರಸ್ತುತ ರೂ. 1,43,200 ಆಗಿದೆ. 1 ಗ್ರಾಂ ಬೆಲೆ: ರೂ. 65 ಇಳಿಕೆಯಾಗಿ ರೂ. 14,320 ತಲುಪಿದೆ.

ಚಿನ್ನದ ಬೆಲೆ ಕುಸಿದಿದ್ದರೆ, ಇನ್ನೊಂದೆಡೆ ಬೆಳ್ಳಿಯ ದರ ಇಂದು ಭಾರಿ ಏರಿಕೆ ಕಂಡಿದೆ. ಕೇವಲ ಒಂದು ಗ್ರಾಂ ಬೆಳ್ಳಿಯ ಬೆಲೆಯಲ್ಲಿ 10 ರೂಪಾಯಿ ಹೆಚ್ಚಳವಾಗಿದ್ದು, ಪ್ರತಿ ಗ್ರಾಂ ಬೆಲೆ ರೂ. 290 ಕ್ಕೆ ತಲುಪಿದೆ. ಇದರೊಂದಿಗೆ ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ 2.90 ಲಕ್ಷ ರೂಪಾಯಿ ತಲುಪಿ ದಾಖಲೆ ಬರೆದಿದೆ.









source https://suddione.com/good-news-for-jewelry-lovers-gold-prices-fall-again-silver-prices-rise-sharply/

0 Comments
If u have any queries, Please let us know