ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್

ಭೂಮಿಯ ಒಳಭಾಗದಲ್ಲಿರುವ ದ್ರವರೂಪದ ಕರಗಿದ ಕಬ್ಬಿಣ ಮತ್ತು ನಿಕ್ಕಲ್‍ನ ನಿರಂತರ ಚಲನೆಯಿಂದಾಗ (ಡೈನಮೋ ಪರಿಣಾಮ) ಭೂಮಿ ಮತ್ತು ಕಾಂತೀಯ ಶಕ್ತಿಯನ್ನು (ಒಚಿgಟಿeಣiಛಿ ಜಿieಟಜ) ಹೊಂದಿದೆ. ಭೂಮಿಯ ತಿರುಗುವಿಕೆ ಮತ್ತು ಅದರ ಕೋರ್‍ನಲ್ಲಿನ ತೀವ್ರ ಶಾಖವು ಈ ವಿದ್ಯುತ್ ಪ್ರವಾಹಗಳನ್ನು ಉಂಟು ಮಾಡುತ್ತದೆ. ಇದು ಭೂಮಿಯನ್ನು ಒಂದು ದೊಡ್ಡಕಾಂತದಂತೆ (ಉಚಿiಟಿಣ ಒಚಿgಟಿeಣ) ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಈ ಕಾಂತ ಕ್ಷೇತ್ರವು ಭೂಮಿಯ ಮೇಲ್ಮೈಯಿಂದ ಬಾಹ್ಯಾಕಾಶದವರೆಗೆ ಹರಡಿಕೊಂಡಿದುದ, ಸೂರ್ಯನಿಂದ ಬರುವ ಹಾನಿಕಾರಕ ಸೌರಮಾರುತ ಮತ್ತು ಕಾಸ್ಮಿಕ್ ವಿಕಿರಣಗಳಿಂದ ಭೂಮಿಯ ಜೀವಗಳನ್ನು ರಕ್ಷಿಸುತ್ತದೆ. ಭೂಮಿಯ ಕಾಂತೀಯ ಗುಣಲಕ್ಷಣಗಳು ಮತ್ತು ಪ್ರಕೃತಿ ವಿವರಣೆಗಳು ಇಂತಿದೆ. ಭೂಮಿಯ ಕೇಂದ್ರಭಾಗದಲ್ಲಿ ದ್ರವರೂಪದ ಕರಗಿದ ಕಬ್ಬಿಣದ ಮತ್ತು ನಿಕ್ಕಲ್ ನಿರಂತರವಾಗಿ ಚಲಿಸುತ್ತಿರುವುದರಿಂದ ವಿದ್ಯುತ್ ಪ್ರವಾಹಗಳು ಸೃಷ್ಟಿಯಾಗುತ್ತದೆ. ಈ ಪ್ರಕ್ರಿಯೆಯನ್ನು ಜಿಯೋಡೇನಿಮೊ ಎಂದು ಕರೆಯುತ್ತಾರೆ ಭೂಮಿಯ ಭೌಗೋಳಿಕ ಉತ್ತರದ್ರುವದ ಬಳಿಕಾಂತೀಯ ದಕ್ಷಿಣ ಧ್ರುವ ಮತ್ತು ಭೌಗೋಳಿಕ ದಕ್ಷಿಣ ಧ್ರುವದ ಬಳಿ ಕಾಂತೀಯ ಉತ್ತರ ಧ್ರುವವಿದೆ. ಮುಕ್ತವಾಗಿ ನೇತಾಡುವ ದಿಕ್ಸೂಚಿ ಸೂಜಿಯು ಯಾವಾಗಲೂ ಉತ್ತರ-ದಕ್ಷಿಣ ದಿಕ್ಕನ್ನು ತೋರಿಸುತ್ತದೆ. ಏಕೆಂದರೆ ಅದು ಭೂಮಿಯ ಕಾಂತೀಯ ಕ್ಷೇತ್ರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಭೂಮಿಯ ಕಾಂತಕ್ಷೇತ್ರವು ಮ್ಯಾಗ್ನಟೋಸಿಮರ್ ಎಂಬ ಗುರಾಣಿಯನ್ನು ನಿರ್ಮಿಸಿ ಸೂರ್ಯನ ಅಪಾಯಕಾರಿ ವಿದ್ಯುದ್ದೀಕೃತ ಕಣಗಳನ್ನು ತಡೆಯುತ್ತದೆ. ಭೂಮಿಯ ಕಾಂತೀಯ ಧ್ರುವಗಳು ಸ್ಥಿರವಾಗಿರುವುದಿಲ್ಲ. ಅವು ಕಾಲಕ್ರಮೇಣ ಚಲಿಸುತ್ತವೆ ಮತ್ತು ಬದಲಾಗುತ್ತವೆ.
ಭೂಮಿಯ ಕಾಂತೀಯ ಕ್ಷೇತ್ರದ ಪ್ರಮುಖ ಉಪಯೋಗಳೇನೆಂದರೆ ಸೂರ್ಯನಿಂದ ಬರುವ ಹಾನಿಕರ ವಿದ್ಯುದಾವಿಷ್ಯ ಕಣಗಳನ್ನು ಇದು ತಡೆಯುತ್ತದೆ. ಈ ಕವಚವಿಲ್ಲದಿದ್ದರೆ ಭೂಮಿಯ ವಾತಾವರಣವು ನಾಶವಾಗಿ, ಜೀವಿಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿತ್ತು. ದಿಕ್ಸೂಚಿ ಬಳಸಿ ನಾವಿಕರು ಪೈಲೆಟ್‍ಗಳು ಮತ್ತು ಪ್ರಾಮಾಣಿಕ ದಿಕ್ಸೂಚಿಗಳನ್ನು (ಉತ್ತರ-ದಕ್ಷಿಣ) ಪತ್ತೆಹಚ್ಚಲು ಈ ಕ್ಷೇತ್ರ ಸಹಾಯ ಮಾಡುತ್ತದೆ. ಉಪಗ್ರಹಗಳು ಮತ್ತು ವಿದ್ಯುತ್ ಜಾಲಗಳು ಸರಿಯಾಗಿ ಕಾರ್ಯನಿರ್ವಹಿಸಲು ಈ ಕ್ಷೇತ್ರ ಅತಿಮುಖ್ಯ ಇದು ಬಾಹ್ಯಕಾಶ ಕವಾಮಾನದ ಹಾನಿಕಾರಕ ಪರಿಣಾಮಗಳಿಂದ ತಂತ್ರಜ್ಞಾನವನ್ನು ರಕ್ಷಿಸುತ್ತದೆ. ಇದು ವಾತಾವರಣದ ಮೇಲ್ಭಾಗದಲ್ಲಿರುವ ಓಝೋನ್ ಪದರಗಳನ್ನು ಉಳಿಸಿಕೊಳ್ಳುತ್ತದೆ. ಇದು ನೇರಳಾತೀತ ಕಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಭೂಮಿಯ ಕಾಂತೀಯ ಶಕ್ತಿಯು ಹವಾಮಾನ ವೈಪರೀತ್ಯ ಮತ್ತು ಮಳೆಯ ಪ್ರಮಾಣಗಳಣ್ನು ನಿಯಂತ್ರಿಸಲು ಪರೋಕ್ಷವಾಗಿ ಸಹಾಯ ಮಾಡುತ್ತದೆ. ಇದು ಕೃಷಿ ಮತ್ತು ದೈನಂದಿನ ಜೀವನಕ್ಕೆ ಮುಖ್ಯವಾಗಿದೆ.
ಕೆಲವು ಪಕ್ಷಿಗಳು ಸಮುದ್ರ, ಆಮೆಗಳು ಮತ್ತು ಬ್ಯಾಕ್ಟೀರಿಯಾಗಳು ಭೂಮಿಯ ಆಯಸ್ಕಾಂತೀಯ ಕ್ಷೇತ್ರವನ್ನು ಬಳಸಿ ದಾರಿ ಹುಡುಕುತ್ತದೆ. ಸಂಕ್ಷೀಪ್ತವಾಗಿ ಹೇಳುವುದಾದರೆ ಭೂಮಿಯ ಕಾಂತೀಯ ಗುಣವು ನಮ್ಮ ಗ್ರಹದ ಮೇಲಿನ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾದ ರಕ್ಷಣಾತ್ಮಕ ಕವಚವಾಗಿದೆ.












source https://suddione.com/the-life-saving-earths-magnetic-force-secrets-science-and-uses-revealed/


0 Comments
If u have any queries, Please let us know