
ಸುದ್ದಿಒನ್,ನವದೆಹಲಿ,ಮೇ.17: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜಾಗತಿಕ ಪರಿಣಾಮಗಳು ಇದೀಗ ನೇರವಾಗಿ ಭಾರತದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿವೆ. ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬೆನ್ನಲ್ಲೇ, ಇದೀಗ ಜೀವ ರಕ್ಷಕ ಔಷಧಗಳ (Life Saving Drugs) ಬೆಲೆಯೂ ಗಗನಕ್ಕೇರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಗೆ ಬರುತ್ತಿರುವ ಹೊಸ ಬ್ಯಾಚ್‌ನ ಔಷಧಗಳ ಬೆಲೆಯಲ್ಲಿ ಸರಾಸರಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆ ಸರಪಳಿ (Supply Chain) ಸಂಪೂರ್ಣವಾಗಿ ಏರುಪೇರಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮಾತ್ರೆಗಳು ಮತ್ತು ಸಿರಪ್‌ಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್ ಅತ್ಯಗತ್ಯ ಕಚ್ಚಾವಸ್ತುವಾಗಿದೆ. ಆದರೆ ಯುದ್ಧದಿಂದಾಗಿ ಕಚ್ಚಾ ತೈಲ ಮತ್ತು ಪೆಟ್ರೋ ಕೆಮಿಕಲ್ಸ್ ಆಮದು ವೆಚ್ಚ ವಿಪರೀತ ದುಬಾರಿಯಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕು ಸಾಗಣೆ ಸಮಯ ಹಾಗೂ ವೆಚ್ಚ ಎರಡೂ ಹೆಚ್ಚಾಗಿರುವುದರಿಂದ, ಫಾರ್ಮಾ ಕಂಪನಿಗಳು ಅನಿವಾರ್ಯವಾಗಿ ಹೊಸ ಬ್ಯಾಚ್‌ನ ಮೆಡಿಸಿನ್‌ಗಳ ದರವನ್ನು ಹಂತ ಹಂತವಾಗಿ ಏರಿಕೆ ಮಾಡುತ್ತಿವೆ.

ಈ ದರ ಏರಿಕೆಯ ಬಿಸಿ ಕೇವಲ ಸಾಮಾನ್ಯ ಕಾಯಿಲೆಗಳಿಗಷ್ಟೇ ಸೀಮಿತವಾಗಿಲ್ಲ. ದಿನನಿತ್ಯ ಬಳಸುವ ಸುಮಾರು 600ಕ್ಕೂ ಹೆಚ್ಚು ಅತ್ಯಗತ್ಯ ಔಷಧಗಳ ಬೆಲೆ ಸದ್ದಿಲ್ಲದೆ ಹೆಚ್ಚಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವು, ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ಮಾತ್ರೆಗಳು, ಕಾರ್ಡಿಯಾಕ್ ಡ್ರಗ್ಸ್ (ಹೃದ್ರೋಗದ ಔಷಧಗಳು), ಗ್ಯಾಸ್ಟ್ರಿಕ್ ಟ್ಯಾಬ್ಲೆಟ್ ಮತ್ತು ಕಾಫ್ ಸಿರಪ್, ಐರನ್ ಟಾನಿಕ್ ಹಾಗೂ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್, ದಿನನಿತ್ಯ ಮಾತ್ರೆಗಳನ್ನೇ ನಂಬಿ ಬದುಕುವ ವೃದ್ಧರು, ದೀರ್ಘಕಾಲದ ಕಾಯಿಲೆ ಇರುವವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಅರಗಿಸಿಕೊಳ್ಳಲಾಗದ ದೊಡ್ಡ ಹೊಡೆತವಾಗಿದೆ.








source https://suddione.com/war-effect-price-of-medicines-likely-to-increase-by-15-20-percent/

0 Comments
If u have any queries, Please let us know