ಭಾರತದಲ್ಲಿ ಭಾಷೆಗಳ ವೈವಿಧ್ಯ: ಹಿಂದಿ ಮೊದಲ ಸ್ಥಾನ, ಕನ್ನಡ ಎಷ್ಟನೇ ಸ್ಥಾನದಲ್ಲಿ?

ಮನುಷ್ಯರ ಪರಸ್ಪರ ಸಂವಹನಕ್ಕೆ ಭಾಷೆ ಪ್ರಮುಖ ಸೇತುವೆಯಾಗಿ ಕೆಲಸ ಮಾಡುತ್ತದೆ. ಪ್ರಪಂಚದಾದ್ಯಂತ ಸುಮಾರು 7,100ಕ್ಕೂ ಹೆಚ್ಚು ಭಾಷೆಗಳು ಬಳಕೆಯಲ್ಲಿದ್ದು, ಸಂಸ್ಕೃತ, ತಮಿಳಿನಂತಹ ಪ್ರಾಚೀನ ಭಾಷೆಗಳ ಜೊತೆಗೆ ಎಸ್ಪರಾಂಟೊದಂತಹ ಕೃತಕ ಭಾಷೆಗಳೂ ಅಸ್ತಿತ್ವದಲ್ಲಿವೆ.

ವೈವಿಧ್ಯತೆಯ ನಾಡಾದ ಭಾರತದಲ್ಲೇ 22 ಅಧಿಕೃತ ಭಾಷೆಗಳು ಮತ್ತು 121 ಪ್ರಮುಖ ಭಾಷೆಗಳು ಬಳಕೆಯಲ್ಲಿವೆ. 2011ರ ಜನಗಣತಿ ಪ್ರಕಾರ, ದೇಶದಲ್ಲಿ ಅತಿಹೆಚ್ಚು ಜನರು ಮಾತನಾಡುವ ಭಾಷೆಯಾಗಿ ಹಿಂದಿ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 32 ಕೋಟಿ ಜನರು ಹಿಂದಿ ಮಾತನಾಡುತ್ತಿದ್ದರೆ, ವಿಶ್ವದಾದ್ಯಂತ ಈ ಸಂಖ್ಯೆ 60 ಕೋಟಿಗೂ ಹೆಚ್ಚು. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂದಿ ಮುಖ್ಯ ಭಾಷೆಯಾಗಿದೆ.

ದೇಶದಲ್ಲಿ ಎರಡನೇ ಅತಿದೊಡ್ಡ ಭಾಷೆಯಾಗಿ ಬಂಗಾಳಿ ಗುರುತಿಸಿಕೊಂಡಿದೆ. ಸುಮಾರು 9.72 ಕೋಟಿ ಜನರು ಬಂಗಾಳಿ ಮಾತನಾಡುತ್ತಿದ್ದು, ಇದು ದೇಶದ ಒಟ್ಟು ಜನಸಂಖ್ಯೆಯ 8.03 ಶೇಕಡಾ. ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಈ ಭಾಷೆ, ಬಾಂಗ್ಲಾದೇಶದ ರಾಷ್ಟ್ರೀಯ ಭಾಷೆಯೂ ಆಗಿದೆ. ಸಂಸ್ಕೃತ ಮತ್ತು ಮಗಧಿ ಪ್ರಾಕೃತದಿಂದ ಅಭಿವೃದ್ಧಿ ಹೊಂದಿದ ಬಂಗಾಳಿ ಭಾಷೆಗೆ ಶ್ರೀಮಂತ ಸಾಹಿತ್ಯ ಪರಂಪರೆ ಇದೆ. ರವೀಂದ್ರನಾಥ್ ಠಾಗೂರ್ ಅವರ ‘ಗೀತಾಂಜಲಿ’ ಕೃತಿಗೆ 1913ರಲ್ಲಿ ಲಭಿಸಿದ ನೋಬೆಲ್ ಪ್ರಶಸ್ತಿ, ಈ ಭಾಷೆಯ ಮಹತ್ವವನ್ನು ಜಗತ್ತಿಗೆ ಪರಿಚಯಿಸಿತು.

ಕನ್ನಡ ಭಾಷೆ ಭಾರತದಲ್ಲಿ 8ನೇ ಸ್ಥಾನದಲ್ಲಿದೆ. ಸುಮಾರು 4.37 ಕೋಟಿ ಜನರು ಕನ್ನಡವನ್ನು ಮಾತನಾಡುತ್ತಿದ್ದು, ಮುಖ್ಯವಾಗಿ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಜೊತೆಗೆ ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲೂ ಕನ್ನಡಿಗರಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ದೇಶಗಳಲ್ಲಿಯೂ ಕನ್ನಡಿಗರು ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. 2,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡವು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದ್ದು, 2008ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿದೆ.



source https://suddione.com/diversity-of-languages-in-india-hindi-ranks-first-where-is-kannada/

Post a Comment

0 Comments