ನಟಾಂಜ್ ಪರಮಾಣು ಸ್ಥಾವರದ ಮೇಲೆ ಬಾಂಬ್‌ಗಳ ಸುರಿಮಳೆ : ಭಾರಿ ದಾಳಿಗೆ ಬೆಚ್ಚಿದ ಇರಾನ್!

 

ಸುದ್ದಿಒನ್

ಮಧ್ಯಪ್ರಾಚ್ಯದ ಮೇಲೆ ಮತ್ತೊಮ್ಮೆ ಯುದ್ಧದ ಕಾರ್ಮೋಡಗಳು ಕವಿದಿವೆ. ಇರಾನ್‌ನ ಅತ್ಯಂತ ಸುರಕ್ಷಿತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾದ ನಟಾಂಜ್ ಪರಮಾಣು ನೆಲೆ ಮೇಲೆ ಅಮೆರಿಕ-ಇಸ್ರೇಲಿ ಪಡೆಗಳು ಜಂಟಿಯಾಗಿ ಬೃಹತ್ ಬಾಂಬ್ ದಾಳಿ ನಡೆಸಿದವು. ಈ ದಾಳಿಯು ಆ ಪ್ರದೇಶದಾದ್ಯಂತ ಭಾರಿ ಸ್ಫೋಟಗಳಿಗೆ ಕಾರಣವಾಯಿತು.

ನಟಾಂಜ್ ಪರಮಾಣು ನೆಲೆ ಗುರಿ : ಈ ಗುರಿ ಪ್ರಧಾನವಾಗಿ
ನಟಾಂಜ್ ಪರಮಾಣು ನೆಲೆಯಾಗಿದ್ದು ದಾಳಿ ನಡೆಸಿದೆ.
ಸ್ಫೋಟಗಳ ಶಬ್ದ ಹಲವು ಕಿಲೋಮೀಟರ್‌ಗಳವರೆಗೆ ಕೇಳಿಬಂದಿದ್ದು, ಆ ಪ್ರದೇಶದಲ್ಲಿ ತೀವ್ರ ಆತಂಕ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ಮಿಲಿಟರಿ ಕ್ರಮವು ಇರಾನ್‌ನ ಪರಮಾಣು ಯೋಜನೆಯನ್ನು ತಡೆಯಲು ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಭಾಗವಾಗಿದೆ.

ತಪ್ಪಿದ ಬಾರೀ ದುರಂತ :
ಈ ಬೃಹತ್ ದಾಳಿಯ ಹೊರತಾಗಿಯೂ, ಬಾರಿ ದುರಂತವೊಂದು ತಪ್ಪಿದಂತಾಗಿದೆ ಎಂದು ಇರಾನಿನ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪರಮಾಣು ನೆಲೆಯಿಂದ ಯಾವುದೇ ವಿಕಿರಣಗಳು ಸೋರಿಕೆಯಾಗಿಲ್ಲ ಎಂದು ಪ್ರಾರಂಭಿಕ ತನಿಖೆಗಳು ದೃಢಪಡಿಸಿದವು. ಯಾವುದೇ ಪರಮಾಣು ತ್ಯಾಜ್ಯ ಹೊರಹೋಗದ ಕಾರಣ ಹತ್ತಿರದ ವಸತಿ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ಜನರು ಸುರಕ್ಷಿತರಾಗಿದ್ದಾರೆ ಎಂದು ಸರ್ಕಾರ ಘೋಷಿಸಿದೆ.

ಗುರಿಯಾಗಿ ಮಾರ್ಪಟ್ಟಿರುವ ನಟಾಂಜ್ : ಈ ಕೇಂದ್ರವು
ಕೆಲವು ದಿನಗಳಿಂದ ಶತ್ರುಗಳ ಪ್ರಮುಖ ಗುರಿಯಾಗಿದೆ. 2025 ರಿಂದ, ನಟಾಂಜ್ ಪರಮಾಣು ನೆಲೆಯ ಮೇಲೆ ಹಲವಾರು ದಾಳಿಗಳು ನಡೆದಿವೆ. ಕಳೆದ ವರ್ಷ ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಕಾಲ ನಡೆದ ಭೀಕರ ಯುದ್ಧದಲ್ಲಿ ನಟಾಂಜ್ ಪ್ರಮುಖ ಗುರಿಯಾಗಿತ್ತು. ಇಲ್ಲಿನ ಯಂತ್ರೋಪಕರಣಗಳು ಮತ್ತು ಕಟ್ಟಡಗಳು ಪ್ರತಿ ಬಾರಿಯೂ ಹಾನಿಗೊಳಗಾಗುತ್ತಿದ್ದರೂ, ಪರಿಸರಕ್ಕೆ ಕಡಿಮೆ ಹಾನಿಯಾಗಿದೆ ಎಂಬುದು ಗಮನಾರ್ಹ. ಈ ದಾಳಿಯೊಂದಿಗೆ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.



source https://suddione.com/bombs-rain-down-on-natanz-nuclear-plant-iran-shocked-by-massive-attack/

Post a Comment

0 Comments