ಇರಾನ್, ಇಸ್ರೇಲ್ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ಘರ್ಷಣೆ (War) ಭಾರತದ ಮೇಲೂ ಪರಿಣಾಮ ಬೀರುತ್ತಿದೆ ಅಡುಗೆ ಎಣ್ಣೆಯ (Cooking Oil) ಬೆಲೆ ಏರಿಕೆಯಾಗಿ ಸಾಮಾನ್ಯ ಜನರಿಗೆ ಆತಂಕಕಾರಿ ಸುದ್ದಿ ಇದಾಗಿದೆ.ಜಾಗತಿಕ ಸರಬರಾಜು ಸರಪಳಿಯ ಅಡಚಣೆಯ ಪರಿಣಾಮದಿಂದ ಬೆಲೆ ಏರಿಕೆ ಕಂಡುಬಂದಿದೆ
ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಒಂದು ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿ ಏರಿಕೆಯಾಗಿದ್ದು, ಮುಂದಿನ ವಾರದಲ್ಲಿ 10 ರಿಂದ 15 ರೂಪಾಯಿ ಹೆಚ್ಚುವ ಸಾಧ್ಯತೆಯಿದೆ. ಗೋಲ್ಡ್ ವಿನ್ನರ್: ಕಳೆದ ವಾರ 1 ಲೀಟರ್ 161 ರೂಪಾಯಿ ಇದ್ದದ್ದು, ಈ ವಾರ 165 ರೂಪಾಯಿ.ಸನ್ ಪ್ಯೂರ್: ಕಳೆದ ವಾರ 161 ರೂಪಾಯಿ, ಈ ವಾರ 165 ರೂಪಾಯಿ.ಫಾರ್ಚೂನ್: ಕಳೆದ ವಾರ 152 ರೂಪಾಯಿ, ಈ ವಾರ 157 ರೂಪಾಯಿ.ಏರಿಕೆ ಆಗಿದೆ. ಇತರ ಬ್ರ್ಯಾಂಡ್‌ಗಳಾದ ಸಫೋಲಾ, ಸನ್‌ಡ್ರಾಪ್ ಮುಂತಾದವುಗಳ ಮೇಲೂ ಸರಾಸರಿ 4 ರಿಂದ 5 ರೂಪಾಯಿ ಏರಿಕೆಯಾಗಿದೆ
ಭಾರತಕ್ಕೆ ಹೆಚ್ಚಿನ ಅಡುಗೆ ಎಣ್ಣೆ (ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಮುಂತಾದವು) ಉಕ್ರೇನ್, ರಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಯುದ್ಧದ ಕಾರಣದಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ. ಯುದ್ಧ ಮುಂದುವರೆದರೆ ಮುಂದಿನ ವಾರದಲ್ಲಿ 10 ರಿಂದ 15 ರೂಪಾಯಿ ಹೆಚ್ಚುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.




source https://suddione.com/cooking-oil-prices-have-increased-due-to-the-effects-of-the-war-do-you-know-what-the-rate-is-now/


0 Comments
If u have any queries, Please let us know