ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ಗೆದ್ದು ಬೀಗಿದೆ. ಅಷ್ಟೆ ಅಲ್ಲದೆ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಯಾರೂ ಮಾಡದ ಒಂದು ಸಾಧನೆಯನ್ನು ಮಾಡಿದೆ. ಮೂರು ಬಾರಿ ವಿಶ್ವಕಪ್ ಗೆದ್ದ ಮೊದಲ ತಂಡ ಭಾರತವಾಗಿದೆ. ಈ ದಾಖಲೆಯ ಜೊತೆ ಭಾರತ ತಂಡ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ.
ಇಲ್ಲಿಯವರೆಗೂ ಯಾವ ದೇಶದ ಕ್ರಿಕೆಟ್ ತಂಡ ಮಾಡದ ಸಾಧನೆಯನ್ನು ಭಾರತ ಮಾಡಿದೆ. ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿದೆ. 2024ರ ಟಿ20 ವಿಶ್ವಕಪ್ ಟೂರ್ನ್ಮೆಂಟ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 11 ವರ್ಷಗಳ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಕಪ್ ಗೆಲ್ಲುವ ಮೂಲಕ 11 ವರ್ಷಗಳ ಕಪ್ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತ್ತು. ಬಳಿಕ 2025ರಲ್ಲಿ ಚಾಂಪಿಯನ್ ಟ್ರೋಫಿಯನ್ನು ಸಹ ಟೀಂ ಇಂಡಿಯಾ ಗೆದ್ದಿತ್ತು. ಇದೀಗ ಟೀಂ ಇಂಡಿಯಾ 2024 ಮತ್ತು 2026ರಲ್ಲಿ ಸತತ ಎರಡನೇ ಬಾರಿಗೆ ಬ್ಯಾಕ್ ಟು ಬ್ಯಾಕ್ ವಿಶ್ವಕಪ್ ಗೆದ್ದಿದೆ.
ಸೂರ್ಯ ಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ಎದುರು 96 ರನ್‌ಗಳಿಂದ ಜಯಿಸುವುದರೊಂದಿಗೆ ತ್ರಿವರ್ಣ ಧ್ವಜಗಳು ರಾರಾಜಿಸಿದವು.





source https://suddione.com/india-has-achieved-a-feat-that-no-other-countrys-cricket-team-has-achieved/


0 Comments
If u have any queries, Please let us know