ಡಾಲರ್ ಎದುರು ರೂಪಾಯಿ ಮೌಲ್ಯ 92 ರೂಪಾಯಿಗೆ ಕುಸಿತವಾಗಿದೆ. ಇದೇ ಮೊದಲ ಬಾರಿಗೆ 92 ರೂಪಾಯಿ 17 ಪೈಸೆಯಾಗಿದೆ. ಸುಮಾರು 68 ಪೈಸೆ ಕುಸಿತ ಕಂಡಿದೆ. ಜಾಗತಿಕ ಸಂಘರ್ಷ, ಕಚ್ಛಾ ತೈಲದ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಕಳೆದ ಜನವರಿಯಲ್ಲಿ 91.98 ರೂಪಾಯಿ ಮೌಲ್ಯ ಕುಸಿದಿತ್ತು. ಭಾರತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳ ಹಿಂತೆಗೆದುಕೊಳ್ಳುವುದು ಕೂಡ ಹೆಚ್ಚಾಗುತ್ತೆ. ಮಧ್ಯಪ್ರಾಚ್ಯದ ಸಂಘರ್ಷದ ಪರಿಸ್ಥಿತಿಗಳು ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ.
ಮಧ್ಯಪ್ರಾಚ್ಯದಲ್ಲಿರುವ ಅನಿವಾಸಿ ಭಾರತೀಯ ಆದಾಯದಲ್ಲಿ ಕುಸಿತವಾಗಿ ಭಾರತಕ್ಕೆ ತಾವೂ ಕಳುಹಿಸುತ್ತಿದ್ದ ದುಡಿಮೆಯ ಹಣ ಕೂಡ ಕಡಿಮೆಯಾಗುತ್ತೆ. ಮಧ್ಯಪ್ರಾಚ್ಯದ ಸಂಘರ್ಷ, ಬಿಕ್ಕಟ್ಟುಗಳಿಂದ ಭಾರತದ ರಿಮೇಟೆನ್ಸ್ ಮೇಲೆ ಪರಿಣಾಮ ಬೀರುತ್ತೆ. ಇರಾನ್ ಮೇಲಿನ ಇಸ್ರೇಲ್, ಅಮೆರಿಕಾ ಯುದ್ಧ ಮುಂದುವರಿಕೆ, ಗಲ್ಫ್ ರಾಷ್ಟ್ರಗಳಲ್ಲಿನ ಸಮಸ್ಯೆಗಳಿಂದ ಭಾರತದ ಆರ್ಥಿಕತೆಯ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತೆ. ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತೆ. ಭಾರತದ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತೆ. ಹಣದುಬ್ಬರ ಏರಿಕೆಯಾಗುತ್ತೆ. ಇಂಥ ಸ್ಥಿತಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತದೆ.
ಜಿಡಿಪಿ ಬೆಳವಣಿಗೆ ಕೂಡ ಕುಸಿಯುತ್ತೆ. ಇದೆಲ್ಲದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತೆ. ಭಾರತವು ತನ್ನ ಅಗತ್ಯತೆಯ ಶೇ.80 ರಷ್ಟು ಕಚ್ಚಾತೈಲವನ್ನು ಅಮದು ಮಾಡಿಕೊಳ್ಳುತ್ತೆ. ಈಗ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 65 ಡಾಲರ್ ನಿಂದ 82 ಡಾಲರ್‌ಗೆ ಏರಿಕೆಯಾಗಿದೆ. ಇದರಿಂದ ಕಚ್ಚಾತೈಲದ ಅಮದಿಗೆ ಭಾರತವು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತೆ. ಇದರಿಂದಾಗಿ ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತೆ ಮತ್ತು ಹಣದುಬ್ಬರ ಕೂಡ ಏರಿಕೆಯಾಗುತ್ತೆ.




source https://suddione.com/rupees-value-drops-against-the-dollar-do-you-know-how-much-it-is-today/


0 Comments
If u have any queries, Please let us know