ಖಮೇನಿ ಪತ್ನಿ ಜೀವಂತ; ಇರಾನ್ ಸ್ಪಷ್ಟನೆ ಹೀಗಿದೆ 

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ್ದ ಭೀಕರ ವೈಮಾನಿಕ ದಾಳಿಯಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈಗ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ (79) ಅವರು ಜೀವಂತವಾಗಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ಅಧಿಕೃತವಾಗಿ ಸ್ಪಷ್ಟಪಡಿಸಿವೆ.

ಕಳೆದ ಫೆಬ್ರವರಿ 28ರಂದು ಟೆಹರಾನ್ ಮೇಲೆ ನಡೆದಿದ್ದ ಭೀಕರ ವೈಮಾನಿಕ ದಾಳಿಯ ವೇಳೆ ಮನ್ಸೌರೆ ಅವರು ತಮ್ಮ ಪತಿ ಖಮೇನಿ ಜೊತೆಗಿದ್ದರು. ಈ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮನ್ಸೌರೆ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 2ರಂದು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ವರದಿಗಳು ಸುಳ್ಳು ಹಾಗೂ ಅವರು ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಇದೀಗ ಇರಾನ್ ಮಾಧ್ಯಮಗಳು ಖಚಿತಪಡಿಸಿವೆ.

ಮಾರ್ಚ್ 12ರ ಸಂಜೆಯ ಹೊತ್ತಿಗೆ ಇರಾನ್‌ನ ಅಧಿಕೃತ ಮಾಧ್ಯಮಗಳು ಮನ್ಸೌರೆಹ್ ಖೋಜಸ್ತೆ ಬಗರ್ಜಾದೆ ಜೀವಂತರಿದ್ದಾರೆ ಎಂದು ದೃಢಪಡಿಸಿವೆ. ಐಆರ್‌ಜಿಸಿ-ಸಂಯೋಜಿತ ಫಾರ್ಸ್ ನ್ಯೂಸ್ ಏಜೆನ್ಸಿ ನೇತೃತ್ವದ ವರದಿಗಳು ಹಿಂದಿನ ಸಾವಿನ ವದಂತಿಗಳನ್ನು ‘ತಪ್ಪು’ ಎಂದು ಕರೆದಿವೆ.



source https://suddione.com/khameneis-wife-is-alive-iran-clarifies/

Post a Comment

0 Comments