2023ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ದಿನದ ಎರಡು ಕಾರ್ಯಕ್ರಮಗಳಿಗೆ ಅಂದಿನ ಬಿಜೆಪಿ ಸರ್ಕಾರ ₹33 ಕೋಟಿ ಖರ್ಚು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲೆಂದೇ ₹6.5 ಕೋಟಿ ಖರ್ಚು ಮಾಡಲಾಗಿದೆ ಎಂದು ಈಗ ಮಾಹಿತಿ ಒದಗಿಬಂದಿದೆ.
2023ರ ಫೆಬ್ರುವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನೆರವೇರಿತ್ತು. ಇದಕ್ಕೆ ₹18.81 ಕೋಟಿ ಖರ್ಚು ಮಾಡಲಾಗಿತ್ತು.ಈ ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಜನರನ್ನು ಕರೆ ತರಲು 1,800 ಬಸ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ₹4.11 ಕೋಟಿ ವೆಚ್ಚ ಮಾಡಲಾಗಿತ್ತು. ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಭಾಷಣದ ವೇದಿಕೆಗೆ ಮಳೆ ನಿರೋಧಕ ಜರ್ಮನ್ ಮಾದರಿಯ ಪೆಂಡಾಲ್ ಹಾಕಲು, ಗ್ರೀನ್ ರೂಂ, ಸ್ಟಾಲ್‌ಗಳು ಮತ್ತು ಹೂವಿನ ಅಲಂಕಾರಕ್ಕಾಗಿ ₹1.8 ಕೋಟಿ ವೆಚ್ಚ ಮಾಡಲಾಗಿತ್ತು. ಇವೆಲ್ಲದಕ್ಕೂ ವೆಚ್ಚ ಮಾಡಲು, ಲೋಕೋಪಯೋಗಿ ಇಲಾಖೆ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4(ಜಿ) ಅಡಿ ವಿನಾಯ್ತಿ ಪಡೆದಿತ್ತು.
ಈ ಕಾರ್ಯಕ್ರಮದ ನಂತರ ಬೆಳಗಾವಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮಕ್ಕೆ ₹14.35 ಕೋಟಿ ವೆಚ್ಚ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರಲೆಂದೇ ₹2.5 ಕೋಟಿ ವೆಚ್ಚ ಮಾಡಲಾಗಿತ್ತು.
‘ಲಂಚಮುಕ್ತ ಕರ್ನಾಟಕ’ ಸಂಘಟನೆಯ ಮಂಜುನಾಥ ಹಿರೇಚೌಟಿ ಅವರು ಮಾಹಿತಿ ಹಕ್ಕು ಅಡಿ ಪಡೆದ ದಾಖಲೆಗಳಲ್ಲಿ ಈ ಮಾಹಿತಿ ಇದೆ.
ಮಂಜುನಾಥ ಅವರು ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು 2023ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. 2026ರ ಜನವರಿಯಲ್ಲಿ ಮಾಹಿತಿ ಪಡೆಯಲು ಯಶಸ್ವಿಯಾದರು.




source https://suddione.com/karnataka-government-spent-on-this-one-day-modi-program-in-2023/


0 Comments
If u have any queries, Please let us know