ಧುರಂಧರ್ 2 ಮುಂದೂಡಿಕೆಯಾಗುತ್ತೆ ಅಂದ್ಕೊಂಡ್ರೆ ಟಾಕ್ಸಿಕ್ ಮುಂದೂಡಿಕೆ..!

ಟಾಕ್ಸಿಕ್ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದೇ 19 ರಂದು ಸಿನಿಮಾ ದೇಶದಾದ್ಯಂತ ರಿಲೀಸ್ ಆಗಬೇಕಿತ್ತು. ಆದರೆ ಇಂದು ಬೆಳ್ಳಂಬೆಳಗ್ಗೆಯೇ ಟಾಕ್ಸಿಕ್ ತಂಡ ಅಪ್ಡೇಟ್ ನೀಡಿದ್ದು, ರಿಲೀಸ್ ದಿನಾಂಕವನ್ನ ಬದಲಾವಣೆ ಮಾಡಿ, ಬೇರೆ ದಿನಾಂಕವನ್ನು ಘೋಷಣೆ ಮಾಡಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಬೇವು ಬೆಲ್ಲ ತಿಂದು, ಹೋಳಿಗೆ ಸವಿದು, ನಲ್ಲಿ ಮೂಳೆ ಜೊತೆಗೆ ಟಾಕ್ಸಿಕ್ ಸಿನಿಮಾ ನೋಡಿ ಎಂಜಾಯ್ ಮಾಡುವ ಮೂಡ್ ನಲ್ಲಿ ಜನ ಇದ್ರು. ಈಗ ಆ ಸಮಯ ಜೂನ್ 4 ಕ್ಕೆ ಮುಂದೂಡಿಕೆ ಆಗಿದೆ.

ಟಾಕ್ಸಿಕ್ ಸಿನಿಮಾದ ಟ್ರೇಲರ್ ಮಾರ್ಚ್ 8ಕ್ಕೆ ರಿಲೀಸ್ ಆಗ್ತಾ ಇದೆ. ಈಗಾಗಲೇ ಎರಡು ಟೀಸರ್ ಅನ್ನು ಟಾಕ್ಸಿಕ್ ಸಿನಿಮಾ ರಿಲೀಸ್ ಮಾಡಿದೆ. ಸಾಂಗ್ ಕೂಡ ರಿಲೀಸ್ ಮಾಡಿ ಆಗಿದೆ. ಈಗ ಇದ್ದಕ್ಕಿದ್ದ ಹಾಗೇ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಟಾಕ್ಸಿಕ್ ಸಿನಿಮಾವನ್ನು ಮುಂದೂಡಿಕೆ ಮಾಡಲಾಗಿದೆ. ಈ ಸಂಬಂಧ ಯಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿಕೊಳ್ಳುವ ಮೂಲಕ ವಿಚಾರವನ್ನು ಮುಟ್ಟಿಸಿದ್ದಾರೆ.

ಇನ್ನು ರಣವೀರ್ ಸಿಂಗ್ ಅವರ ಧುರಂಧರ್ 2 ಸಿನಿಮಾ ಕೂಡ ಸೇಮ್ ಡೇಟ್ ಅಂದ್ರೆ ಮಾರ್ಚ್ 19 ರಂದೇ ರಿಲೀಸ್ ಆಗ್ತಾ ಇದೆ. ಟಾಕ್ಸಿಕ್ ಈಗಾಗಲೇ ಪ್ರಚಾರವನ್ನು ಶುರು ಮಾಡಿದ್ದರು, ಧುರಂಧರ್ 2‌ ಸಿನಿಮಾ ಯಾವುದೇ ಪ್ರಚಾರ ಶುರು ಮಾಡಿರಲಿಲ್ಲ. ಹೀಗಾಗಿ ಧುರಂಧರ್ 2 ಸಿನಿಮಾ ಟಾಕ್ಸಿಕ್ ಮುಂದೆ ಬರದೆ ಇರಬಹುದು. ಮುಂದೂಡಿಕೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈಗ ಉಲ್ಟಾ ಆಗಿದೆ.



source https://suddione.com/if-dhurandhar-2-is-postponed-then-its-a-toxic-postponement/

Post a Comment

0 Comments