ಭಿಕ್ಷುರೆಂದರೆ ಬೇಡಿಕೊಂಡು ತಿನ್ನುವವರು ಎಂಬ ಕೀಳರಿಮೆ ಕೆಲವರಲ್ಲಿ ಇದೆ. ಇನ್ನು ಕೆಲವರಲ್ಲಿ ಭಿಕ್ಷುಕರೆಂದರೆ ಹಳೆಯದನ್ನು ತಿನ್ನುವವರು ಎಂಬ ಆಲೋಚನೆ ಇದೆ. ಆದರೆ ಇದು ತಪ್ಪು ಎಂದು ತಿಳಿಸುವ ಘಟನೆಯೊಂದು ನಡೆದಿದೆ. ಭಿಕ್ಷುಕನೊಬ್ಬ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ತನಗೆ ಆಹಾರ ತಂದು ಕೊಟ್ಟ ಡೆಲಿವರಿ ಬಾಯ್‌ಗೆ ಟಿಪ್ಸ್ ನೀಡಿದಂತಹ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಫರ್ದಿನ್ ಖಾನ್ ಎಂಬುವರು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಡೆಲಿವರಿ ಏಜೆಂಟ್ ಪರಿಚಯವಿಲ್ಲದ ಸ್ಥಳಕ್ಕೆ ಹೋದಾಗ ಕೆಲವು ಕ್ಷಣಗಳ ನಂತರ, ರಸ್ತೆಬದಿಯಲ್ಲಿ ಒಬ್ಬ ವ್ಯಕ್ತಿ ಕಂಬಳಿಯನ್ನು ಹೊದ್ದು ಮಲಗಿರುವುದನ್ನು ಗಮನಿಸಿ, ಆ ವ್ಯಕ್ತಿಯೇ ಆಹಾರ ಆರ್ಡರ್ ಮಾಡಿದ ವ್ಯಕ್ತಿ ಎಂದು ತಿಳಿದು ಶಾಕ್ ಆಗಿದ್ದಾನೆ. ಡೆಲಿವರಿ ಏಜೆಂಟ್ ವೀಡಿಯೊದಲ್ಲಿ ಭಿಕ್ಷುಕ ಆಹಾರವನ್ನು ಆರ್ಡರ್ ಮಾಡಿದ್ದಾನೆ ಎಂದು ಹೇಳುವುದನ್ನು ಕೇಳಬಹುದು.
ಡೆಲಿವರಿ ಏಜೆಂಟ್ ಆ ವ್ಯಕ್ತಿಯನ್ನು ನೀವು ನಿಜವಾಗಿಯೂ ಆರ್ಡರ್ ಮಾಡಿದ್ದೀರಾ ಎಂದು ಕೇಳಿದಾಗ, ಆ ವ್ಯಕ್ತಿ ಶಾಂತವಾಗಿ ಹೌದು ಎಂದು ಹೇಳುತ್ತಾನೆ ಹಾಗೂ ಆಹಾರವನ್ನು ನಾನು ಏಕೆ ಆರ್ಡರ್ ಮಾಡಬಾರದು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಡೆಲಿವರಿ ಏಜೆಂಟ್, ಯಾಕೆ ಮಾಡಬಾರದು ಖಂಡಿತ ಮಾಡಬಹುದು ಎಂದು ಹೇಳುತ್ತಾನೆ. ನಂತರ ಆ ಭಿಕ್ಷುಕನಂತಿದ್ದ ವ್ಯಕ್ತಿ ತಕ್ಷಣ 50 ರೂಪಾಯಿ ಟಿಪ್ ಬೇರೆ ನೀಡುತ್ತಾನೆ. ಇದರಿಂದ ಡೆಲಿವರಿ ಏಜೆಂಟ್ ಮತ್ತಷ್ಟು ಆಶ್ಚರ್ಯಪಟ್ಟಿದ್ದಾನೆ.




source https://suddione.com/the-beggar-ordered-food-online-do-you-know-how-much-he-tipped-the-delivery-boy/


0 Comments
If u have any queries, Please let us know