ಪಾಸ್ ಪೋರ್ಟ್ ಹೊಸ ನಿಯಮಗಳು ಫೆಬ್ರವರಿ 15 ರ ನಂತರ ಜಾರಿಗೆ ಬರಲಿದೆ. ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಭಾರತ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಕಾಗದದ ಕೆಲಸವನ್ನು ಕಡಿಮೆ ಮಾಡಲು ಪ್ರಕ್ರಿಯೆಯನ್ನು ಡಿಜಿಟಲೈಸ್ ಮಾಡಲಾಗಿದೆ ಹಾಗಾಗಿ ಪಾಸ್ಪೋರ್ಟ್ ಕಚೇರಿಗಳಿಗೆ ಪದೇ ಪದೇ ಹೊಗಬೇಕಾಗಿಲ್ಲ.
ಮುಖ್ಯವಾಗಿ ಯಾವುದೇ ಎಜೆಂಟ್ (ಮಧ್ಯವರ್ತಿಗಳಿಲ್ಲದೆ) ಅರ್ಜಿದಾರರೇ ಫಾರ್ಮ್ ತುಂಬಲು ಅವಕಾಶವಿದೆ.ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಮೊದಲು ಪಾಸ್ಪೋರ್ಟ್ ಸೇವಾ ಅಧಿಕೃತ ವೆಬ್ಸೈಟ್ಗೆ (passportindia.gov.in) ಭೇಟಿ ನೀಡಿ.
‘New User Registration’ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ. “Apply for Fresh Passport/Re-issue of Passport” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಫಾರ್ಮ್ ಅನ್ನು ಆನ್ ಲೈನ್ ನಲ್ಲಿ ತುಂಬಿ.
ನಿಮ್ಮ ಪ್ರಮುಖ ದಾಖಲೆಗಳನ್ನು (ಆಧಾರ್, ವಿಳಾಸದ ಪುರಾವೆ) ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡಬೇಕು. ‘Pay and Schedule Appointment’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಆನ್ಲೈನ್ ಮೂಲಕ ಶುಲ್ಕ ಪಾವತಿಸಿ. ನಂತರ ನಿಮ್ಮ ಹತ್ತಿರದ ಪಾಸ್ಪೋರ್ಟ್ ಸೇವಾ ಕೇಂದ್ರ ಅಥವಾ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಆಯ್ದುಕೊಂಡು ದಿನಾಂಕವನ್ನು ನಿಗದಿಪಡಿಸಿ. ನಿಗದಿತ ದಿನದಂದು ಮೂಲ ದಾಖಲೆಗಳೊಂದಿಗೆ (Original Documents) ಪಾಸ್ಪೋರ್ಟ್ ಕಚೇರಿಗೆ ಹೋಗಿ. ಅಲ್ಲಿ ನಿಮ್ಮ ಫೋಟೋ ಮತ್ತು ಬೆರಳಚ್ಚು (Biometrics) ತೆಗೆದುಕೊಳ್ಳಲಾಗುತ್ತದೆ.


source https://suddione.com/now-you-can-get-a-passport-from-home-how/


0 Comments
If u have any queries, Please let us know