ನೆಟ್‌ವರ್ಕ್ ಬದಲಾಯಿಸಿದಾಗ ನಾವು ಸಿಮ್ ಕಾರ್ಡ್‌ಗಳನ್ನು ಬಿಸಾಡುತ್ತೇವೆ. ಆದರೆ, ಇಲ್ಲೊಬ್ಬರು ಅದೇ ಹಳೆಯ ಸಿಮ್ ಕಾರ್ಡ್ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಬಳಸಿ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾನೆ.ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಹುಯಿಝೌ ಮೂಲದ ಕ್ವಿಯಾವೊ ಎಂಬುವವರು ಈ ಪ್ರಯೋಗ ಮಾಡಲಾಗಿದೆ.
ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಸಿಮ್ ಕಾರ್ಡ್‌ಗಳು ಮತ್ತು ಮೆಮೊರಿ ಕಾರ್ಡ್‌ಗಳ ಮೇಲೆ ಹಳದಿ ಬಣ್ಣ ಇರುವುದನ್ನು ನಾವೆಲ್ಲ ಗಮನಿಸಿರಬಹುದು. ಇದು ಕೇವಲ ಬಣ್ಣವಲ್ಲ, ಚಿನ್ನದ ತೆಳುವಾದ ಲೇಪನವಾಗಿರುತ್ತದೆ. ಚಿನ್ನವು ಅತ್ಯುತ್ತಮ ವಿದ್ಯುತ್ ವಾಹಕವಾಗಿದೆ ಮತ್ತು ಇದು ತುಕ್ಕು ಹಿಡಿಯುವುದಿಲ್ಲ. ಡೇಟಾ ವೇಗವಾಗಿ ವರ್ಗಾವಣೆಯಾಗಲು ಮತ್ತು ಕಾರ್ಡ್ ದೀರ್ಘಕಾಲ ಬಾಳಿಕೆ ಬರಲು ಈ ಚಿನ್ನದ ಲೇಪನವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಒಂದು ಸಿಮ್ ಕಾರ್ಡ್‌ನಲ್ಲಿ 0.001 ಗ್ರಾಂ ಗಿಂತಲೂ ಕಡಿಮೆ ಪ್ರಮಾಣದ ಚಿನ್ನವಿರುತ್ತದೆ.
ಲೋಹ ಸಂಸ್ಕರಣಾ ತಜ್ಞರಾಗಿರುವ ಕ್ವಿಯಾವೊ, ಸುಮಾರು 2 ಟನ್ ತೂಕದ ಹಳೆಯ ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಚಿಪ್‌ಗಳಂತಹ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಇವುಗಳನ್ನ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಅದರಿಂದ 191 ಗ್ರಾಂ ಶುದ್ಧ ಚಿನ್ನವನ್ನು ಹೊರತೆಗೆದಿದ್ದಾರೆ. ಮಾರುಕಟ್ಟೆ ಮೌಲ್ಯದ ಪ್ರಕಾರ ಇದರ ಬೆಲೆ ಸುಮಾರು 27 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿದೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿ ಮನೆಯಲ್ಲೇ ಚಿನ್ನ ತೆಗೆಯುವ ಸಾಹಸಕ್ಕೆ ಕೈಹಾಕಬೇಡಿ ಎಂದು ಕ್ವಿಯಾವೊ ಎಚ್ಚರಿಕೆ ನೀಡಿದ್ದಾರೆ. ಚಿನ್ನವನ್ನು ಬೇರ್ಪಡಿಸಲು ಹೈಡ್ರೋಕ್ಲೋರಿಕ್ ಆಮ್ಲದಂತಹ ಪ್ರಬಲ ಆಮ್ಲಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕ ಕ್ರಿಯೆಯ ಸಮಯದಲ್ಲಿ ಹೊರಬರುವ ಅನಿಲ ಅತ್ಯಂತ ವಿಷಕಾರಿ ಮತ್ತು ಜೀವಹಾನಿಕಾರಕ. ವೃತ್ತಿಪರ ತರಬೇತಿ ಪಡೆದವರಿಗೆ ಮಾತ್ರ ಸಾಧ್ಯವಿರುವ ಕೆಲಸ ಇದಾಗಿದೆ.




source https://suddione.com/this-man-stole-rs-27-lakh-worth-of-gold-from-discarded-sim-cards/


0 Comments
If u have any queries, Please let us know