ವಿಜಯ್ ಮಲ್ಯ ಅವರು ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದರು. ಹೀಗಾಗಿಯೇ ಮಲ್ಯ ಅವರ ಆಸ್ತಿಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿತ್ತು. ಇದೀಗ ಬ್ಯಾಂಕ್ ಗಳ ವಿರುದ್ಧ ಮಲ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಸಾಲದ ಸಂಬಂಧ ಬ್ಯಾಂಕ್ ಗಳು ಈವರೆಗೆ ಎಷ್ಟು ಆಸ್ತಿಯನ್ನ ಮುಟ್ಟುಗೋಲು ಹಾಕಿದೆ ಎಂಬುದರ ಲೆಕ್ಕವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಆ ಅರ್ಜಿ ವಿಚಾರಣೆ ನಡೆದಿದೆ. ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಲಲಿತಾ ಕೆನ್ನಿಗಂಟಿಯವರ ಏಕಸದಸ್ಯ ಪೀಠವೂ ಪ್ರಶ್ನೆ ಮಾಡಿದೆ.
ನೀವೂ ಕಂಪನಿ ಕೋರ್ಟ್ ಗೆ ಅರ್ಜಿ ಸಲ್ಲಿಸಿಲ್ಲ ಯಾಕೆ..? ರಿಟ್ ಅರ್ಜಿಯಲ್ಲಿ ಬ್ಯಾಂಕ್ ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರಿ ಎಂದು ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯಗೆ ಪ್ರಶ್ನೆ ಮಾಡಿತು. ಕೋರ್ಟ್ ನಲ್ಲಿ ಪೂವಯ್ಯ ವಾದ ಮಂಡಿಸಿದ್ದು, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತೆ. ಬ್ಯಾಂಕ್ ನವರು ಒಂದು ಹೇಳುತ್ತಾರೆ, ಅಫೀಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಯುಬಿಹೆಚ್ಎಲ್ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ಡಾ.ವಿಜಯ್ ಮಲ್ಯ ಯುಬಿಹೆಚ್ಎಲ್ ನಿರ್ದೇಶಕರಾಗಿದ್ದರು. ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕೆಂದು ಸಜ್ಜನ್ ಪೂವಯ್ಯ ವಾದ ಮಂಡಿಸಿದ್ದಾರೆ.
ಮದ್ಯಪ್ರವೇಶಿಸಿದ ಹೈಕೋರ್ಟ್, ಸುಪ್ರೀ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ ನೀವು ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನೆ ಮಾಡಿತು. ವಾದ ಪ್ರತಿವಾದದ ಬಳಿಕ ಕೋರ್ಟ್ ಮಲ್ಯಗೆ ಯಾವ ರೀತಿಯ ಉತ್ತರ ಕೊಡಲಿದೆ ಎಂಬುದನ್ನ ನೋಡಬೇಕಿದೆ.

source https://suddione.com/mallya-moves-high-court-against-banks-do-you-know-the-reason/


0 Comments
If u have any queries, Please let us know