ಬೆಂಗಳೂರು: ನವೆಂಬರ್ ತಿಂಗಳಿನಿಂದ ಕೆಲವೊಂದು ವಸ್ತುಗಳ ಮೇಲೆ ವ್ಯತ್ಯಾಸವಾಗಲಿದೆ. ಆಧಾರ್ ಕಾರ್ಡ್ ನಿಂದ ಹಿಡಿದು ಬ್ಯಾಂಕ್ ವರೆಗೆ ಒಂದಷ್ಟು ಬದಲಾವಣೆಗಳಾಗಿದೆ. ಹಾಗಾದ್ರೆ ನವೆಂಬರ್ ನಿಂದ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ನಲ್ಲಿ ಒಂದಷ್ಟು ಬದಲಾವಣೆಯಾಗಲಿದೆ. ಯುಐಡಿಎಐ ಮಕ್ಕಳ ಆಧಾರ್ ಕಾರ್ಡ್ ಗಳ ಬಯೋಮೆಟ್ರಿಕ್ ಅಪ್ಡೇಟ್ 125 ರೂಪಾಯಿ ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತ ಇರಲಿದೆ. ವಯಸ್ಕರರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಅಪ್ಡೇಟ್ ಮಾಡಲು 75 ರೂಪಾಯಿ, ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಅಪ್ಡೇಟ್‌ಗೆ 125 ರೂಪಾಯಿ ನಿಗದಿಪಡಿಸಲಾಗಿದೆ.
ಬ್ಯಾಂಕ್ ವಿಚಾರದಲ್ಲಿ ಇಂದಿನಿಂದ ಅಂದರೆ ನವೆಂಬರ್ 1 ರಿಂದ ಬ್ಯಾಂಕ್ ಗಳು ಗ್ರಾಹಕರಿಗೆ ಒಂದು ಖಾತೆ, ಲಾಕರ್ ಅಥವಾ ಸೇಫ್ ಕಸ್ಟಡಿಗೆ ನಾಲ್ಕು ಜನರನ್ನು ನಾಮ ನಿರ್ದೇಶನ ಮಾಡಲು ಅವಕಾಶ ನೀಡುತ್ತವೆ. ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭವಾಗೊ ಪಡೆಯಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಈ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಹಾಗೆ ಹೊಸ ಜಿಎಸ್ಟಿ ನಿಯಮಗಳು ಜಾರಿಯಾಗಲಿದ್ದು, ಸರ್ಕಾರವು ಕೆಲ ವಸ್ತುಗಳಿಗೆ ವಿಶೇಷ ದರದೊಂದಿಗೆ ಹೊಸ ಎರಡು ಸ್ಲ್ಯಾಬ್ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದು ಇಂದಿನಿಂದ ಜಾರಿಗೆ ಬರುತ್ತಿದೆ. ಹಿಂದಿನ ಶೇಕಡ 5, 12, 18, ಮತ್ತು 28ರ ನಾಲ್ಕು ಸ್ಲ್ಯಾಬ್ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ. ಹೀಗಾಗಿ ನವೆಂಬರ ಮೊದಲ ದಿನದಿಂದ ಹಲವು ಬದಲಾವಣೆಗಳು ಆಗಲಿವೆ.

source https://suddione.com/aadhaar-bank-account-gst-what-will-change-from-november/


0 Comments
If u have any queries, Please let us know