ವಿಶೇಷ ಲೇಖನ :
ವೀರಣ್ಣ ಬ್ಯಾಗೋಟಿ, ಬೀದರ
ಮೊ : 9845766714
ಸುದ್ದಿಒನ್
ಗಾನ ಕೋಗಿಲೆ ಎಂಬ ಬಿರುದನ್ನು ಹೊಂದಲು ಆಸೆಪಟ್ಟವರು ನಿರಂತರ ಸಂಗೀತ ಸಾಧಕ ದಿಗ್ಗಜರು. ಕೋಗಿಲೆಯ ಕಂಠದಿಂದ ಹೊರಹೊಮ್ಮುವ ಸುಶ್ರಾವ್ಯ ಧ್ವನಿ ಕೇಳಲು ಸಮಸ್ತ ಮನುಷ್ಯ ಮೊದಲ್ಗೊಂಡು ಸಂಪೂರ್ಣ ಪ್ರಾಣಿ ಸಂಕುಲ ಹಾತೊರೆಯುವುದು. ಆದರೆ ಕೋಗಿಲೆಗಳ ಸ್ವಾರ್ಥದ ಜೀವನದ ಹಿಂದೆ ಎಷ್ಟೊಂದು ಕಠೋರ ಸತ್ಯ ಅಡಗಿದೆ ಅರ್ಥಮಾಡಿಕೊಂಡರೆ ಹೌದಾ!ಕೋಗಿಲೆ ಇಷ್ಟು ಸ್ವಾರ್ಥಿಯಾ? ಎನ್ನುವುದರಲ್ಲಿ ಅಚ್ಚರಿಯಿಲ್ಲ.
ಕಾಗೆ ಬಣ್ಣ ಕಡುಕಪ್ಪು, ಕರ್ಕಶ ಧ್ವನಿ, ಮೇಲ್ನೋಟಕ್ಕೆ ಒಕ್ಕಣ್ಣ,
ಅದು ಕಣ್ಣಿಗೆ ಕಂಡರೆ ಅಪಶಕುನ, ಮೈಮೇಲೆ ಬಿದ್ದಂತೆ ಸದಾ ಎಚ್ಚರಾಗಿ ನಡೆಯುವುದು ಸಾಮಾನ್ಯ.
ಕೋಗಿಲೆಗಳು ಎಲ್ಲ ಪಕ್ಷಿಗಳಂತೆ ಮೊಟ್ಟೆ ಇಡುತ್ತವೆ. ಆದರೆ ತಾವೇ ನಿರ್ಮಿಸಿಕೊಂಡ ಗೂಡುಗಳಲ್ಲಿ ಅಲ್ಲ,ನೆಲದ ಮೇಲೆ ಮರೆಯಲ್ಲಿ.ತಮ್ಮ ಮೊಟ್ಟೆಗಳನ್ನು ಕಾಗೆಯ ಗೂಡಿಗೆ ರವಾನಿಸುತ್ತವೆ, ಅದೂ ಗೂಡು ಕಟ್ಟಿಕೊಂಡ ಯಜಮಾನ ಕಾಗೆ ಇಲ್ಲದಿರುವಾಗ. ಹಾಗೆಯೆ ಮೊದಲೇ ಆ ಗೂಡಿನಲ್ಲಿ ಕಾಗೆ ಇಟ್ಟ ಮೊಟ್ಟೆಗಳನ್ನು ಆ ಗೂಡಿನಿಂದ ಹೊರಹಾಕುತ್ತವೆ.
ಕೋಗಿಲೆಯಿಂದ ಕಾಗೆಯ ಮೊಟ್ಟೆ-ಭ್ರೂಣ ಹತ್ಯೆ :
ಒಮ್ಮೆ ಸುರಕ್ಷಿತವಾಗಿ ಕಾಗೆಗೂಡಿಗೆ ಕೋಗಿಲೆಯು
ತನ್ನ ಮೊಟ್ಟೆಗಳನ್ನು ಗುಟ್ಟಾಗಿ ಬಚ್ಚಿಟ್ಟಿತೋ ಮುಂದಿನದು ಕಾಗೆಯ ಹೊಣೆ. ಹೊರ ಹೋಗಿದ್ದ ಕಾಗೆ ಮರಳಿ ಗೂಡಿಗೆ ಬಂದಾಗ ತನ್ನ ಮೊಟ್ಟೆಗಳತ್ತ ಕಣ್ಣಾಯಿಸಿ ತನ್ನದು ಯಾವುದು, ಕೋಗಿಲೆಯದು ಯಾವುದು ಎಂದು ತಿಳಿಯಲು ಕೋಗಿಲೆಯ ನಯವಂಚಕ ಬುದ್ಧಿಯಿಲ್ಲ. ಎಲ್ಲವೂ ನನ್ನವೇ ಎಂದು ತಿಳಿದು ತಾರತಮ್ಯವಿಲ್ಲದೆ ವಂಚನೆಯ ಅರಿವಿಲ್ಲದೆ ಕಾವು ಕೊಟ್ಟು ಮರಿ ಮಾಡುತ್ತದೆ.
ಕಾಗೆಯ ಗೂಡಿನ ಮೊಟ್ಟೆಗಳನ್ನು :
ಹೊರದಬ್ಬುವ ಕೋಗಿಲೆಗಳ, ಸ್ವಾರ್ಥದ ನಡವಳಿಕೆ. ಎಲ್ಲವೂ ನನ್ನವೆ ಕಾವುಕೊಟ್ಟು ಮರಿಮಾಡುವ ಹೊಣೆ ನನ್ನದು ಎಂದು ಭಾವಿಸುವ ಕಾಗೆಯ ಪರೋಪಕಾರ ನಡವಳಿಕೆ.
ಮಾನವರು ನಾವು ಕಾಗೆಗಳಿಗೆ ಮಹತ್ವ ನೀಡುವುದೆ ಪಿತೃ ಪಕ್ಷದಲ್ಲಿ, ಪಿಂಡದಾನದಲ್ಲಿ ಕಾಗೆಗಳಿಗೆ ಚಾತಕಪಕ್ಷಿಯಂತೆ ಕಾಯುತ್ತೇವೆ, ಒಮ್ಮೆ ಕಾಗೆಗಳು ಬಂದು ಪಿಂಡ ತಿಂದವೋ ಮುಗಿಯತಲ್ಲಿಗೆ ನಮ್ಮ ಅವುಗಳ ಒಡನಾಟ. ಕಾಗೆಗಳ ನೆನಪಿನ ಶಕ್ತಿ ಜನ್ಮ ಜನ್ಮಂತರಗಳದ್ದು.ಅದೇ ಸ್ವಾರ್ಥಿ ಕೋಗಿಲೆಗಳ ಸುಶ್ರಾವ್ಯಕ್ಕಾಗಿಕಾಡು ಮೇಡು ಅಲೆದಾಡಿ ಸಂಗೀತ ಆಲಿಸಲು ಹಾತೊರೆಯುತ್ತೇವೆ. ಸಂಗೀತ ಸಾಮ್ರಾಜ್ಯದ ದಿಗ್ಗಜರು ಗಾನಕೋಗಿಲೆ ಎಂಬ ಬಿರುದು ಹೊಂದಲು ಆಸೆ ಪಟ್ಟವರೇ ಎಲ್ಲ.
ಈಗ ನಾವು ಯಾರಾಗಬೇಕು
ಪರೋಪಕಾರಿ ಕಾಗೆಯೋ?
ಸ್ವಾರ್ಥದ ಕೋಗಿಲೆಯೋ?
ದೇಶಕ್ಕೆ ಮೋಸ ಮಾಡಿ ಅಕ್ರಮದಾರಿಗಳಿಂದ ದೋಚುವ ನಯವಂಚಕ ಬುದ್ಧಿವಂತರೋ, ಪರಿಶ್ರಮ-ಪ್ರಾಮಾಣಿಕತೆಯಿಂದ ಎಲ್ಲರೊಂದಿಗೆ ಬಾಳು ನಡೆಸುವ ಸಾಮಾನ್ಯ ಜನರೋ ತೀರ್ಮಾನ ಅವರವರ ಇಚ್ಛೆಯಂತೆ. ಮೇಲು,ಕೀಳು ಬಡವ, ಶ್ರೀಮಂತ, ಜ್ಞಾನಿ,
ಅಜ್ಞಾನಿ ಭೇದ ತೊಲಗುವುದು ಯಾವಾಗ, ಯಾರಿಂದ ಕಾಗೆಗಳಿಂದಲೋ, ಕೋಗಿಲೆಗಳಿಂದಲೋ.ಕಾಗೆ ಅಂತರಂಗದ ಆತ್ಮರೂಪಿ ಕೋಗಿಲೆ ಬಹಿರಂಗದ ಧ್ವನಿರೂಪಿ.ನಮಗೆ ಅಂತರಂಗದ ಆತ್ಮ ಬೆಳಕು ಬೇಕೋ? ಬಹಿರಂಗದ ಬೂಟಾಟಿಕೆಯ ಕತ್ತಲೆ ಸಾಕೋ? ನಡೆಯಲಿ ಆತ್ಮಾವಲೋಕನ.
ಆಧಾರ: ಪಕ್ಷಿಗಳ ತಜ್ಞರ ಅಧ್ಯಯನ. ಪುರಾಣ ಕಥೆಗಳು.
ವಿಶೇಷ ಲೇಖನ :
ವೀರಣ್ಣ ಬ್ಯಾಗೋಟಿ, ಬೀದರ
ಮೊ : 9845766714


source https://suddione.com/the-benevolent-crow-and-the-selfish-cuckoo-a-special-article-by-veeranna-bagoti/



0 Comments
If u have any queries, Please let us know