ಬೆಂಗಳೂರು : ಕಳೆದ ಕೆಲ ದಿನಗಳಿಂದ ಅಂತು ಚಿನ್ನದ ಬೆಲೆಯಲ್ಲಿ ಏರಿಕೆ ವೇಗಗತಿ ಕಂಡಿದೆ. ಹೆಣ್ಣು ಮಕ್ಕಳಂತು ಚಿನ್ನದ ಮೇಲಿನ ಆಸೆಯನ್ನೇ ಬಿಟ್ಟು ಬಿಡಬೇಕು ಎಂಬ ಆಲೋಚನೆಗೆ ಬಂದಿದ್ದೇ ಹೆಚ್ಚು. ಆದರೆ ತಜ್ಞರು ಚಿನ್ನದ ಬೆಲೆ ಇಳಿಯುವ ಬಗ್ಗೆ ಸಣ್ಣ ಮಾಹಿತಿಯನ್ನ ಹಂಚಿಕೊಂಡಿದ್ದರು. ಸದ್ಯದ ಬೆಳವಣಿಗೆ ನೋಡ್ತಾ ಇದ್ರೆ ಅದೇ ಸತ್ಯ ಅನ್ನಿಸ್ತಾ ಇದೆ. ಸದ್ಯಕ್ಕೆ ಹೆಣ್ಣು ಮಕ್ಕಳಿಗೆ ಚಿನ್ನದ ವಿಚಾರದಲ್ಲಿ ಖುಷಿಯ ಸುದ್ದಿ ಬಂದಿದೆ.
ಇಂದಿನ ಚಿನ್ನದ ದರದಲ್ಲಿ ಬೆಲೆ ಏರಿಕೆಯೇ ಆಗಿದೆ. ಆದರೂ ಕಳೆದ ಏಳು ದಿನಗಳಲ್ಲಿ ಹೋಲಿಕೆ ಮಾಡಿಕೊಂಡರೆ ಒಂದು ಹಂತಕ್ಕೆ ಇಳಿಕೆಯೂ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 35 ರೂಪಾಯಿ ಏರಿಕೆಯಾಗಿದೆ. ಈ ಮೂಲಕ 1 ಗ್ರಾಂ ಚಿನ್ನದ ಬೆಲೆ 11,500 ರೂಪಾಯಿ ಆಗಿದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆ 38 ರೂಪಾಯಿ ಏರಿಕೆಯಾಗಿದ್ದು, 12,546 ರೂಪಾಯಿ ಆಗಿದೆ.
ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ 24 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆಯೂ 77 ಸಾವಿರ ರೂಪಾಯಿಗೆ ಕುಸಿತ ಕಂಡಿದೆ. 2025 ರಲ್ಲಿ ಚಿನ್ನದ ಬೆಲೆಯೂ 77 ಸಾವಿರ ರೂಪಾಯಿ ಕುಸಿದಿದೆ. 2025 ರಲ್ಲಿ ಚಿನ್ನದ ಬೆಲೆಯೂ ಬರೋಬ್ಬರಿ ಶೇಕಡ 60 ರಷ್ಟು ಏರಿಕೆಯಾಗಿತ್ತು. ಗೋಲ್ಡ್ ಇನ್ವೆಸ್ಟ್ ಮೆಂಟ್ ನಲ್ಲಿ 2025 ಉತ್ತಮ ವರ್ಷವಾಗಿತ್ತು. ಈಗ ಚಿನ್ನದ ಬೆಲೆಯೂ ಇಳಿಕೆಯೂ ಆರಂಭವಾಗಿದೆ. ಬೆಳ್ಳಿ ಬೆಲೆಯೂ ದೀಪಾವಳಿ ಹಬ್ಬ ಮುಗಿದ ಬಳಿಕ ಕುಸಿಯುತ್ತಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,59,000 ರೂಪಾಯಿಗೆ ಕುಸಿದಿದೆ. 2025 ರಲ್ಲಿ ಬೆಳ್ಳಿ ಬೆಲೆಯೂ ಶೇ.70 ರಷ್ಟು ರಿಟರ್ನ್ಸ್ ಅನ್ನು ಹೂಡಿಕೆದಾರರಿಗೆ ನೀಡಿತ್ತು.


source https://suddione.com/good-news-for-women-gold-price-drops-by-77-thousand-in-a-single-week/


0 Comments
If u have any queries, Please let us know