ಆಂಧ್ರ ಬಸ್ ದುರಂತದಲ್ಲಿ 20ಕ್ಕೂ ಹೆಚ್ಚು ಜನ ಸಜೀವ ದಹನ : ಕರ್ನಾಟಕದವರು ಇದ್ದಾರಾ..?

ಬೆಂಗಳೂರು: ಹೈದ್ರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದಂತ ಖಾಸಗಿ ಬಸ್ ಗೆ ಬೆಂಕಿ ಬಿದ್ದಿದ್ದು, 20ಕ್ಕೂ ಹೆಚ್ಚು ಜನರು ಸಜೀವ ದಹನಗೊಂಡಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಚಿನ್ನಟೆಕೋರು ಗ್ರಾಮದ ಬಳಿ ಖಾಸಗಿ ಕಾವೇರಿ ಸ್ವೀಪರ್ ಬಸ್ ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಏಕಾಏಕಿ ಬಸ್ ನಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಧಗಧಗ ಹೊತ್ತಿ ಉರಿದಿದೆ. ಇದರಿಂದ ಪ್ರಯಾಣಿಕರು ತಕ್ಷಣಕ್ಕೆ ಹೊರ ಬರಲು ಆಗಿಲ್ಲ. ಬಸ್ ನಲ್ಲಿದ್ದ 42 ಪ್ರಯಟಣಿಕರ ಪೈಕಿ 20ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಇದರಲ್ಲಿ 15ಕ್ಕೂ ಅಧಿಕ ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಹೈದ್ರಾಬಾದ್ ಅವರದ್ದು ಬಸ್. ಛತ್ತೀಸ್ಗಢದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಕರ್ನೂಲ್ ಹತ್ತಿರ ಬೆಂಕಿ ಹೊತ್ತಿಕೊಂಡು ಬಹಳ ಮಂದಿ ತೀರಿ ಹೋಗಿದ್ದಾರೆ. ಅಲ್ಲಿ ನಮ್ಮ ಆರ್ಟಿಓ ಅಧಿಕಾರಿಗಳು ಇರ್ತಾರಲ್ಲ ಅವರುಗೆ ಹೇಳಿದ್ದೀನಿ. ಬಾಗೇಪಲ್ಲಿಯಲ್ಲಿ ಇರುವ ಅಧಿಕಾರಿಗಳಿಗೆ ತಿಳಿಸಿ, ನಮ್ಮ ಕರ್ನಾಟಕದವರು ಯಾರಾದ್ರೂ ಇದ್ದಾರಾ ಎಂಬುದನ್ನ ತಿಳಿದುಕೊಳ್ಳುವುದಕ್ಕೆ ಹೇಳಿದ್ದೇನೆ. ಈಗಾಗಲೇ ಅಧಿಕಾರಿಗಳು ಅಲ್ಲಿಗೆ ಹೋಗ್ತಾ ಇದ್ದಾರೆ. ಕರ್ನಾಟಕ ಸೇರಿದಂತೆ ಯಾವೆಲ್ಲಾ ರಾಜ್ಯದವರು ಇದ್ದಾರಾ ಎಂಬುದನ್ನ ತಿಳಿದುಕೊಳ್ಳುವಂತೆ ಹೇಳಿದ್ದೇನೆ ಎಂದಿದ್ದಾರೆ.

 

https://x.com/KP_Aashish/status/1981523463505662207

ಬಸ್ ನೊಳಗೆ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿದ್ದ ಕಾರಣ ಜನ ಹೊರಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಹಲವರು ಎಮರ್ಜೆನ್ಸಿ ಡೋರ್ ನಿಂದ ಹೊರಗೆ ಬಂದರೆ, ಇನ್ನು ಕೆಲವರು ಕಿಟಕಿ ಹೊಡೆದುಕೊಂಡು ಹೊರಗೆ ಬಂದಿದ್ದಾರೆ.



source https://suddione.com/more-than-20-people-burnt-alive-in-andhra-bus-tragedy-are-there-any-from-karnataka/

Post a Comment

0 Comments