
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಸೆ. 07 : ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚಾರಣೆಯ ಕಾರ್ಯಕ್ರಮದಲ್ಲಿ ನಿನ್ನೆ(ಸೆಪ್ಟೆಂಬರ್. 06, ಶನಿವಾರ) ರಾತ್ರಿ ಗಣಪತಿಯ ಮೆರವಣಿಗೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಕಳೆದ ಆ, 27 ರಿಂದ ಪ್ರಾರಂಭವಾದ ವಿನಾಯಕ ಪ್ರತಿಷ್ಠಾಪನಾ ಕಾರ್ಯಕ್ರಮ 11 ದಿನಗಳ ಕಾಲ ಪ್ರತಿ ದಿನ ನಿರಂತರವಾಗಿ ಪೂಜೆ, ಅಭೀಷೇಕ ನಡೆದಿದ್ದು, ಇದರೊಂದಿಗೆ ಗಣಹೋಮ ಪ್ರತಿ ದಿನ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆದಿದ್ದಲ್ಲದೆ ಪ್ರತಿ ದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿದ್ದು, ಸೆ.6ರ ಸಂಜೆ ಶ್ರೀ ಪ್ರಸನ್ನ ಸೇವಾ ಗಣಪತಿಯ ಮೆರವಣಿಗೆಯನ್ನು ಕೀರ್ತಿ ಆಸ್ಪತ್ರೆಯ ವೈದ್ಯರಾದ ಮಲ್ಲಿಕಾರ್ಜನ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರದ ಹೆಸರಾಂತ ಬ್ರಾಸ್ ಬ್ಯಾಂಡ್ ಆದ ಶಾರದ ಬ್ರಾಸ್ ಬ್ಯಾಂಡ್, ನ್ಯಾಸಿಕ್‍ನ ಡೋಲು, ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಿನಾಯಕ ಮೆರವಣಿಗೆಯನ್ನು ನಡೆಸಲಾಯಿತು.
ರಾತ್ರಿ 10.30ಕ್ಕೆ ಚಂದ್ರವಳ್ಳಿಯಲ್ಲಿ ನಿರ್ಮಾಣ ಮಾಡಳಾದ ನೀರಿನ ತೊಟ್ಟಿಯಲ್ಲಿ ಕ್ರೇನ್ ಮೂಲಕ ಶ್ರೀ ಪ್ರಸನ್ನ ಸೇವಾ ಗಣಪತಿಯನ್ನಯ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿಯ ಕಾರ್ಯಾಧ್ಯsಕ್ಷರಾದ ಗೋಪಾಲರಾವ್‍ಜಾಧವ್, ಉಪಾಧ್ಯಕ್ಷರಾದ ಎಲ್.ಎನ್.ರಾಜಕುಮಾರ, ಜಿ.ಎಂ. ನಾಗರಾಜ್ ಬೇದ್ರೇ, ಪ್ರಧಾನ ಕಾರ್ಯದರ್ಶಿ ಪಿ.ಎಲ್.ಶಿವಕುಮಾರ್, ಖಂಜಾಚಿ ಆನಂದ್, ಸಹ ಕಾರ್ಯ ದರ್ಶಿ ಶ್ಯಾಂ ಪ್ರಸಾದ್ ಸ್ಥಪತಿ ನಾರಾಯಣರಾವ್, ಯಶವಂತ, ವಿದ್ಯಾಧರ್,ರಮೇಶ್, ಕಾರ್ತಿಕ ಕಠಾರೆ ಸೇರಿದಂತೆ ಇತರರು ಭಾಗವಹಿಸಿದ್ದರು.



0 Comments
If u have any queries, Please let us know