
ಚಿತ್ರದುರ್ಗ : ಶಾಸಕ ವೀರೇಂದ್ರ ಪಪ್ಪಿ ಅವರು ಸದ್ಯ ಇಡಿ ವಶದಲ್ಲಿದ್ದಾರೆ. ಅವರ ಸಾಮ್ರಾಜ್ಯವನ್ನು ಕೆದಕುತ್ತಾ ಹೋದಂತೆ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈಗಾಗಲೇ ಮೂರು ಬಾರಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಿದ ಜಾಗದಲ್ಲೆಲ್ಲಾ ಮುಟ್ಟಿದ್ದೆಲ್ಲಾ, ಬೆಳ್ಳಿ, ವಜ್ರವೇ ಸಿಕ್ತಾ ಇದೆ. ಸದ್ಯ 14 ದಿನಗಳ ಕಾಲ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಇಡಿ ಅಧಿಕಾರಿಗಳಿಗೆ ಲೆಕ್ಕವೇ ತಪ್ಪಬೇಕು ಆ ರೇಂಜಿಗಿದೆ ಖಚಾನೆ. ಅಕ್ರಮ ಆನ್ಲೈನ್ ಹಾಗೂ ಆಫ್ಲೈನ್ ಅಕ್ರಮ ಆಟಗಳಲ್ಲಿ ಈಗ ಬಂಧಿಯಾಗಿದ್ದಾರೆ. ಪಪ್ಪಿ ಬಳಿ ಇರುವ ಆಸ್ತಿ ಕಂಡು ಇಡಿ ಅಧಿಕಾರಿಗಳೆ ದಂಗಾಗಿದ್ದಾರೆ. ಕಳೆದ 20 ದಿನದಿಂದ ನಡೆಯುತ್ತಿರುವ ಶೋಧ ಕಾರ್ಯ ಮುಗಿಯುವಂತೆ ಕಾಣುತ್ತಿಲ್ಲ. ಹಾಗಾದ್ರೆ ವೀರೇಂದ್ರ ಪಪ್ಪಿ ಬಳಿ ಏನೆಲ್ಲಾ ಇದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಆಕ್ಸಿಸ್ ಬ್ಯಾಂಕ್ ನಲ್ಲಿ 24.5 ಕೆಜಿ ಚಿನ್ನದ ಬಿಸ್ಕೇಟ್ ಅನ್ನ ಇಟ್ಟಿದ್ದರು. 17 ವಜ್ರದ ಉಂಗುರಗಳು ಪತ್ತೆಯಾಗಿದೆ ಇದು ಆಕ್ಸಿಸ್ ಬ್ಯಾಂಕ್ ಆದರೆ ಮಹೀಂದ್ರ ಕೋಟಾಕ್ ಬ್ಯಾಂಕ್ ನಲ್ಲು ದೊಡ್ಡ ಜಾಲವೇ ಪತ್ತೆಯಾಗಿದೆ. ಐದು ಕೆಜಿ ಗೋಲ್ಡ್ ಬಿಸ್ಕತ್ತು ಸಿಕ್ಕಿದ್ದು, ಎಸ್ಬಿಐ ಬ್ಯಾಂಕ್ ಲಾಕರ್ ಪರಿಶೀಲನೆ ಮಾಡಿದಾಗ ಅದರಲ್ಲಿ ಗಟ್ಟಿ ಬಂಗಾರದ ಬಿಸ್ಕೆಟ್ಸ್ ಹಾಗೂ ಹಲವು ಆಸ್ತಿ ಪತ್ರಗಳು ಸಿಕ್ಕಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿರುವ ಇಡಿ ಅಧಿಕಾರಿಗಳು ಸದ್ಯ ಪಪ್ಪಿಯ ಸಾಮ್ರಾಜ್ಯವನ್ನು ಕೆದಕುತ್ತಾ ಇದ್ದಾರೆ. ಪ್ರತಿದಿನ ದಾಳಿ ನಡೆಸಿದರು, ದುಬಾರಿ ವಸ್ತುಗಳೇ ಸಿಗುತ್ತಿವೆ. ತನಿಖೆಯೂ ನಡೆಯುತ್ತಿದೆ.




0 Comments
If u have any queries, Please let us know