
ಧರ್ಮಸ್ಥಳದಲ್ಲಿ ನಾನೇ ಹೆಣಗಳನ್ನ ಹೂತಾಕಿದ್ದೀನಿ ಅಂತ ಬಂದು ಸೆನ್ಸೇಷನ್ ಸೃಷ್ಟಿ ಮಾಡಿದ್ದ ಚಿನ್ನಯ್ಯ ಇದೀಗ ಶಿವಮೊಗ್ಗ ಜೈಲಿಗೆ ಶಿಫ್ಟ್ ಆಗಿದ್ದಾರೆ. ಬೆಳ್ತಂಗಡಿಯ ಜೆಎಂಎಫ್ಸಿ ಕೋರ್ಟ್ ಈ ಆದೇಶವನ್ನ ಹೊರಡಿಸಿದೆ. ನ್ಯಾಯಾಂಗ ಬಂಧನಕ್ಕೆ ನೀಡಿರುವ ಕೋರ್ಟ್ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಿದೆ. ಮಧ್ಯರಾತ್ರಿ 1.20ರ ಸಮಯಕ್ಕೆ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ. ಇಂದಿನಿಂದ ಕಾವೇರಿ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಬೆಳ್ತಂಗಡಿ ಕೋರ್ಟ್ ನಿಂದ ಶಿವಮೊಗ್ಗ ಕೋರ್ಟ್ ಗೆ ಶಿಫ್ಟ್ ಮಾಡುವಾಗ ಚಿನ್ನಯ್ಯ ಪಶ್ಚಾತ್ತಾಪದ ಭಾವದಲ್ಲಿದ್ದ ಎನ್ನಲಾಗಿದೆ. ಯಾಕಂದ್ರೆ ಶಿವಮೊಗ್ಗ ಜೈಲು ಸೇರುವಾಗ ಕಣ್ಣೀರು ಹಾಕಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದ ಬಳಿ ವಾಹನದಿಂದ ಇಳಿದು ಹೋಗುವಾಗ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ. ಈ ಎಲ್ಲಾ ಬೆಳವಣಿಗೆಗಳು ಆತನಿಗೆ ಪಾಪ ಪ್ರಜ್ಞೆ ಕಾಡಿತ್ತಾ ಎಂಬ ಪ್ರಶ್ನೆಯನ್ನ ಹುಟ್ಟು ಹಾಕಿದೆ.
ಧರ್ಮಸ್ಥಳದಲ್ಲಿ ನಾನು ಈ ಮೊದಲು ಕೆಲಸ ಮಾಡುತ್ತಿದ್ದೆ. ಹೆಣಗಳನ್ನ ಹೂತು ಹಾಕಿದ್ದೇನೆ ಎಂದು ಒಂದು ಬುರುಡೆಯನ್ನು ಇಟ್ಟುಕೊಂಡು ನೇರವಾಗಿ ಕೋರ್ಟ್ ಮುಂದೆ ಹಾಜರಾಗಿದ್ದ ಈ ಚಿನ್ನಯ್ಯ. ಆಮೇಲೆ ಸರ್ಕಾರವೂ ಎಸ್ಐಟಿಗೆ ಕೇಸ್ ಅನ್ನು ವಹಿಸಿತ್ತು. ಆತ ತೋರಿಸಿದ ಜಾಗದಲ್ಲೆಲ್ಲಾ ಅಗೆದರು ಹೆಣ ಮಾತ್ರ ಸಿಕ್ಕಿರಲಿಲ್ಲ. ಈ ಸಂಬಂಧ ಧರ್ಮಸ್ಥಳದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾನೆ ಇದೆ. ಸದ್ಯ ಎಸ್ಐಟಿ ಅಧಿಕಾರಿಗಳು ಆತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ 850 ಕೈದಿಗಳಿರುವ ಜೈಲಿಗೆ ಈಗ ಚಿನ್ನಯ್ಯನನ್ನು ಶಿಫ್ಟ್ ಮಾಡಿದ್ದಾರೆ. ಕಣ್ಣೀರಿಡುತ್ತಲೇ ಜೈಲಿಗೆ ಚಿನ್ನಯ್ಯ ಹೋಗಿದ್ದಾರೆ ಎನ್ನಲಾಗಿದೆ.




0 Comments
If u have any queries, Please let us know