
ಬೆಂಗಳೂರು: ಇಂದು ರಾತ್ರಿ ಅಪರೂಪದ ರಕ್ತ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಅಪರೂಪದ ಚಂದ್ರಗ್ರಹಣ ಇದಾಗಿದೆ. ಚಂದ್ರನೂ ಭೂಮಿಗೆ ಹತ್ತಿರವಾಗುವುದರಿಂದ ತುಂಬಾ ದೊಡ್ಡದಾಗಿ ಕಾಣಲಿದೆ. ಅಪರೂಪದ ಚಂದ್ರಗ್ರಹಣವನ್ನು ಇಂದು ನೋಡಿಯೂ ಕಣ್ತುಂಬಿಕೊಳ್ಳಬಹುದು. ಗ್ರಹಣದ ಸಂದರ್ಭದಲ್ಲಿ ಚಂದ್ರನ ಬಣ್ಣವು ಚಿನ್ನದ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಈ ವರ್ಷ ಸಂಭವಿಸುತ್ತಿರುವ ಎರಡನೇ ಸಂಪೂರ್ಣ ಚಂದ್ರಗ್ರಹಣ ಇದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.00 ರಿಂದ 12.22ರವರೆಗೆ ಚಂದ್ರಗ್ರಹಣ ಗೋಚರವಾಗಲಿದೆ. ಹಾಗೇ ಏಷ್ಯಾ, ಆಸ್ಟ್ರೇಲಿಯಾ ಮತ್ತು ಯೂರೋಪಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.ಸೂರ್ಯನ ಬೆಳಕು ಚಂದ್ರನ ಡಿಸ್ಕ್ ಅನ್ನು ಬೆಳಗಿಸುತ್ತದೆ. ಭೂಮಿಯು ಮಧ್ಯದಲ್ಲಿರೋದ್ರಿಂದ ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯ ವಾತಾವರಣದ ಮೂಲಕ ಹಾದು ಹೋಗುತ್ತದೆ.
ಗ್ರಹಣಗಳು ಅನ್ನೋದೇ ಅಪರೂಪದ ವಿದ್ಯಾಮಾನ. ಸೂರ್ಯಗ್ರಹಣ ಬರೀ ಕಣ್ಣಿನಲ್ಲಿ ನೋಡಬಾರದು. ಆದರೆ ಚಂದ್ರಗ್ರಹಣವನ್ನು ಬರೀ ಕಣ್ಣಿನಲ್ಲಿ ನೋಡಬಹುದು. ಇದು ಸುಂದರ ಪ್ರಾಕೃತಿಕ ವಿದ್ಯಾಮಾನ. ಚಂದ್ರಗ್ರಹಣವನ್ನು ನೋಡಿ ಎಂಜಾಯ್ ಮಾಡಿ ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಅವರು ಹೇಳಿದ್ದಾರೆ. ಇದು ಸಂಪೂರ್ಣ ಚಂದ್ರಗ್ರಹಣ. ಅದ್ಭುತವಾದ ದೃಶ್ಯ ಕಾಣಬಹುದು. ಬಹಳ ಅಪರೂಪದ ಗ್ರಹಣ. ಎಲ್ಲರೂ ನೋಡಬೇಕು. ಬರೀ ಗಣ್ಣಿನಿಂದ ನೋಡಬಹುದು. ಯಾವುದೇ ತೊಂದರೆ ಆಗಲ್ಲ. ಇದು ಯಾವುದೇ ಬಗೆಯ ಅಪಾಯವನ್ನುಂಟು ಮಾಡುವುದಿಲ್ಲ. ಐದಿ ಗಂಟೆ 27 ನಿಮಿಷಗಳ ಕಾಲ ನಡೆಯುವ ಸುಧೀರ್ಘ ಸಮಯದ ಗ್ರಹಣ ಇದಾಗಿದೆ ಎಂದು ನೆಹರೂ ತಾರಾಲಯದ ನಿರ್ದೇಶಕ ಡಾ.ಬಿ.ಆರ್ ಗುರುಪ್ರಸಾದ್ ತಿಳಿಸಿದ್ದಾರೆ.




0 Comments
If u have any queries, Please let us know