
ಬೆಂಗಳೂರು: ಪ್ರತಿವರ್ಷ ಕೂಡ ಸೈಮಾ ಅವಾರ್ಡ್ ಅನ್ನ ಸಿನಿಮಾರಂಗದವರಿಗೆ ಅವಾರ್ಡ್ ಕೊಡ್ತಾ ಇರ್ತಾರೆ. ಈ ವರ್ಷವೂ ಕೂಡ ದುಬೈನಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದೆ. ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರುವವರು ದುನಿಯಾ ವಿಜಯ್ ಅಲ್ಲ. ಅಲ್ಲಿಯೇ ಇದ್ದ ಕಾರಣ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.
ಕಳೆದ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡದ ಸೆಲೆಬ್ರೆಟಿಗಳ ಆಯೋಕರಿಂದ ಅವಮಾನವಾಗಿತ್ತು. ಸೂಕ್ತ ವಸತಿ, ಪ್ರಯಾಣದ ಸೌಲಭ್ಯಗಳನ್ನು ನೀಡಲು ಆಗಿರಲಿಲ್ಲ. ಆದರೆ ಈ ಬಾರಿ ಎಲ್ಲವೂ ಸರಿ ಹೋಗಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದ್ದು, ಮತ್ತೊಮ್ಮೆ ಸೈಮಾದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ. ಸೈಮಾ ಕಾರ್ಯಕ್ರಮ ಸಾಮಾನ್ಯವಾಗಿ ಎರಡು ದಿನ ನಡೆಯುತ್ತದೆ. ಪ್ರತಿದಿನವೂ ಎರಡು ಬಾಬಷೆಯ ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ನಿನ್ನೆ ಅಂದ್ರೆ ಸೆಪ್ಟೆಂಬರ್ 5ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಟತ್ಯುತ್ತಮ ಸಿನಿಮಾ ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ವಿತರಣೆ ನಡೆಯಿತು. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ಆದರೆ ತೆಲುಗು ಸಿನಿಮಾದವರಿಗೆ ಮೊದಲ ಆದ್ಯತೆಯನ್ನು ಆಯೋಜಕರು ನೀಡಿದ್ದು, ಸ್ಪಷ್ಟವಾಗಿ ಗೋಚರಿಸಿತು. ಇದನ್ನು ದುನಿಯಾ ವಿಜಯ್ ಸೈಮಾ ವೇದಿಕೆ ಮೇಲೆಯೇ ಗಟ್ಟಿಯಾಗಿ ಖಂಡಿಸಿದರು. ಸಹಜವಾಗಿಯೇ ತೆಲುಗು ಚಿತ್ರರಂಗದ ಸೆಲೆಬ್ರೆಟಿಗಳು ಕಾರ್ಯಕ್ರಮದಿಂದ ನಿರ್ಗಮಿಸಿದರು. ತಡವಾಗಿದ್ದ ಜಾರಣ ಜನರು ಸಹ ಬಹುತೇಕ ನಿರ್ಗಮಿಸಿದ್ದರು. ವೇದಿಕೆ ಮುಂಭಾಗ ಬಹುತೇಕ ಖಾಲಿ ಆದ ಬಳಿಕ ಕನ್ನಡಿಗರಿಗೆ ಪ್ರಶಸ್ತಿ ನೀಡಲು ಮುಂದಾದರು. ಭೀಮಾ ಸಿನಿಮಾಗೆ ಪ್ರಶಸ್ತಿ ಸ್ವೀಕರಿಸಿಲು ಮುಂದಾದಾಗ ದುನಿಯಾ ವಿಜಯ್, ಯಾರೂ ಇಲ್ಲದಿದ್ದಾಗ ಸ್ಟೇಜ್ ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೊದು ಎಷ್ಟು ಸರಿ? ಕನ್ನಡ ಭಾಷೆ ಮೇಲಿದೆ ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮಕ್ಕೆ ಈ ರೀತಿ ಮಾಡಬೇಡಿ, ಹೀಗಾದರೆ ಇನ್ನು ಮುಂದೆ ನಾವ್ಯಾರು ಸೈಮಾ ಕಾರ್ಯಕ್ರಮಕ್ಕೆ ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನು ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರು ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ?’ ಎಂದರು.




0 Comments
If u have any queries, Please let us know