
ಮೈಸೂರು: ಈ ಬಾರಿಯ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿದಾಗಿನಿಂದಲೂ ವಿರೋಧಗಳು ಕೇಳಿ ಬರುತ್ತಿವೆ. ಅದರಲ್ಲೂ ಬಿಜೆಪಿ ನಾಯಕರಲ್ಲಿ ವಿರೋಧ ವ್ಯಕ್ತಪಡಿಸಿದವರಲ್ಲಿ ಪ್ರತಾಪ್ ಸಿಂಹ ಮೊದಲಿಗರು. ಅವರ ಚಿಂತನೆಗಳು ಬೇರೆನೆ ಇದೆ. ಅವರಿಗೆ ಚಾಮುಂಡೇಶ್ವರಿ ತಾಯಿ ಮೇಲೆ ನಂಬಿಕೆ ಇಲ್ಲ ಎಂಬ ಮಾತನ್ನ ಹೇಳಿದ್ದರು. ಅದಾದ ಮೇಲೆ ಬಿಜೆಪಿ ನಾಯಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇತ್ತೀಚೆಗಷ್ಟೇ ದಸರಾ ಆಡಳಿತ ಬಾನು ಮುಷ್ತಾಕ ಅವರ ಬಳಿ ಹೋಗಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಈ ಸಂಬಂಧ ಸರ್ಕಾರದ ನಿರ್ಧಾರಕ್ಕೆ ತಡೆ ತರಬೇಕೆಂದು ಕೋರಿ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ, ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ. ಮೈಸೂರಿನ ರಾಜಮನೆಯನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಹಿಂದೂ ಪರ ಸಂಘಟನೆಗಳು ಕೂಡ ಬಾನು ಮುಷ್ತಾಕ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೂ ಒಂದಷ್ಟು ವಿರೋಧದ ನಡುವೆ ಬಾನು ಮುಷ್ತಾಕ ಅವರನ್ನೇ ಅಧಿಕೃತವಾಗಿ ಸರ್ಕಾರ ಆಹ್ವಾನ ಮಾಡಿದೆ. ಬಾನು ಮುಷ್ತಾಕ ಅವರು ಯಾವ ರೀತಿ ಉದ್ಘಾಟನೆಯ ರೀತಿಯನ್ನ ಫಾಲೋ ಮಾಡ್ತಾರೆ ಎಂಬುದನ್ನ ನೋಡಬೇಕಿದೆ.




0 Comments
If u have any queries, Please let us know