ವೀರೇಂದ್ರ ಪಪ್ಪಿಗೆ ತಪ್ಪಿಲ್ಲ ಇಡಿ ಸಂಕಟ : ಇಂದು ಮತ್ತೆ ಇಡಿ ಅಧಿಕಾರಿಗಳಿಂದ ಪರಿಶೀಲನೆ

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 06 : ಆನ್ಲೈನ್ ಆಪ್ ನಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಲಾಗಿದೆ ಎಂಬ ಆರೋಪ ವೀರೇಂದ್ರ ಪಪ್ಪಿ ಅವರ ಮೇಲಿದೆ. ಹೀಗಾಗಿಯೇ ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ನಡುವೆ ಅದ್ಯಾಕೋ ಏನೋ ಇಡಿ ಸಂಕಟ ಇನ್ನು ತಪ್ಪುತ್ತಿಲ್ಲ. ಬ್ಯಾಕ್ ಟು ಬ್ಯಾಕ್ ದಾಳಿ ನಡೆಸುತ್ತಲೇ ಇದೆ. ಇದೀಗ ಇಂದು ಮತ್ತೆ ದಾಳಿ ನಡೆದಿದೆ. ಇನ್ನಷ್ಟು ಅಕೌಂಟ್ ಗಳನ್ನ ಜಪ್ತಿ ಮಾಡಿದೆ.

ಚಳ್ಳಕೆರೆ ನಗರದ ಬ್ಯಾಂಕ್ ಗಳಿಗೆ ಇಂದು ಭೇಟಿ ನೀಡಿದ ಇಡಿ ಅಧಿಕಾರಿಗಳು, ವೀರೇಂದ್ರ ಪಪ್ಪಿ ಅವರ ಅಕೌಂಟ್ ಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ನಲ್ಲಿ ಎಷ್ಟೆಲ್ಲಾ ಅಕೌಂಟ್ ಗಳಿದಾವೆ, ಅದರಲ್ಲಿ‌ನ ವ್ಯವಹಾರ ಎಲ್ಲವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ಕೋಟೇಕ್ ಮಹೇಂದ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪೆಡರಲ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಸೇರಿ ಹಲವೆಡೆ ಪರಿಶೀಲನೆ ನಡೆಸಿದ್ದಾರೆ. ಹದಿನೈದು ದಿನಗಳಲ್ಲಿ ಮೂರನೇ ಬಾರಿಗೆ ಈ ದಾಳಿ ನಡೆದಿದೆ.

ನಾಲ್ಕು ಇನ್ನೋವಾ ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಇಡಿ ಅಧಿಕಾರಿಗಳಿಂದ ಬ್ಯಾಂಕ್ ಗಳಿಗೆ ಭೇಟಿ ನೀಡಿದ್ದ, ವೀರೇಂದ್ರ ಪಪ್ಪಿ ಅಕೌಂಟ್ ಗಳ ಪರಿಶೀಲನೆ ನಡೆಸಿದ್ದಾರೆ. ವೀರೇಂದ್ರ ಪಪ್ಪಿಗೆ ಸೇರಿದ ಖಾತೆಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಹದಿನೇಳು ಬ್ಯಾಂಕ್ ಖಾತೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಬ್ಯಾಂಕ್ ಲಾಕರ್ ಗಳನ್ನು ಓಪನ್ ಮಾಡುವ ಸಾಧ್ಯತೆ ಜಾಸ್ತಿ ಇದೆ ಎನ್ನಲಾಗಿದೆ. ಈಗಾಗಲೇ ಸಾಕಷ್ಟು ದಾಖಲೆಗಳನ್ನ ತನ್ನ ವಶಕ್ಕೆ ಪಡೆದುಕೊಂಡಿರುವ ಇಡಿ ಅಧಿಕಾರಿಗಳು ಇದು ಸೇರಿ ಮೂರನೇ ಬಾರಿ ದಾಳಿ ನಡೆಸಿದ್ದಾರೆ.

{}

Post a Comment

0 Comments