
ಹಿರಿಯೂರು, ಸೆಪ್ಟೆಂಬರ್. 07 : ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ 64 ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿ, ಸಹಕಾರಿ ಸಂಘಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆ,ಪಶು ಸಂಗೋಪನೆ ಇಲಾಖೆ ವತಿಯಿಂದ ದೊರೆಯುವ ಸರ್ಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.
ಕ.ರಾ.ಪ.ಸ.ಸ. ನಿ ಜಿಲ್ಲಾ ನಿರ್ದೇಶಕ ಹಾಗೂ ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಕಂದಿಕೆರೆ ಜಗದೀಶ್ ಮಾತನಾಡಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರ ಸಹಕಾರದಿಂದ ರಾಷ್ಟೀಯ ಸುಸ್ಥಿರ ಅಭಿಯಾನ ಯೋಜನೆಯಲ್ಲಿ ಹಿರಿಯೂರು ತಾಲೂಕಿನ 1000 ರೈತರಿಗೆ 2.50 ಕೋಟಿ ಸಹಾಯಧನ ವನ್ನು ಮುಂಜೂರು ಮಾಡಲಾಗಿದೆ. ತಾಲೂಕಿನ ಸಾವಿರ ರೈತರ ಬದುಕಿಗೆ ಇದು ಆಧಾರವಾಗಲಿದ್ದು ಅರ್ಹ ಮತ್ತು ಅವಶ್ಯಕತೆ ಇರುವ ರೈತರು ಈ ಯೋಜನೆಯ ಲಾಭ ಪಡೆಯಬೇಕು. ಎಲ್ಲಾ ಸಹಕಾರಿ ಸಂಘಗಳ ಪದಾಧಿಕಾರಿಗಳು ಈ ಯೋಜನೆಯ ಯಶಸ್ಸಿಗೆ ಶ್ರಮಿಸಬೇಕು. ಆಸಕ್ತ ಸಹಕಾರಿಗಳು ಛಾಪಾಕಾಗದ ವಿತರಣೆ,ಆಹಾರ ಸಂಸ್ಕರಣ ಕೇಂದ್ರಗಳು,ಗೊಬ್ಬರ ಬೀಜ ಕೇoದ್ರಗಳನ್ನು ತೆರೆಯಲು ಅನುಮತಿ ಪಡೆದು ಸಹಾಯಧನ ಪಡೆಯಲು ಆಸಕ್ತಿ ವಹಿಸಬೇಕು. ರೈತರು ಹಾವುಕಡಿತ,ಆತ್ಮಹತ್ಯೆ, ಆಕಸ್ಮಿಕ ಮರಣಗಳಂತಹ ಅವಘಡಗಳಿಗೆ ತುತ್ತಾದಾಗ ಸರ್ಕಾರದ ಸೌಲಭ್ಯವನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರಾದ ಕುಮಾರ್,ತಿಪ್ಪೇಸ್ವಾಮಿ, ಪಶು ಸಂಗೋಪನೆ ಇಲಾಖೆ ವೈಧ್ಯಾಧಿಕಾರಿ ನಾಗರಾಜ್, ಕೃಷಿ ಅಧಿಕಾರಿ ಕಿರಣ್, ವಿಸ್ತರಣಾಧಿಕಾರಿ ಕೃಷ್ಣಕುಮಾರ್ ಹಾಗೂ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.




0 Comments
If u have any queries, Please let us know