1925 ರಿಂದ 2025 ರವರೆಗೆ ನೂರು ವರ್ಷಗಳಲ್ಲಿ ಚಿನ್ನದ ದರ ಯಾವಾಗ ಎಷ್ಟು ಹೆಚ್ಚಾಯಿತು ? ಇಲ್ಲಿದೆ ಸಂಪೂರ್ಣ ಮಾಹಿತಿ…!

 

ಸುದ್ದಿಒನ್

ಇಂದಿನ ದಿನಗಳಲ್ಲಿ ಚಿನ್ನದ ಬೆಲೆ ಬಾರೀ ಏರಿಕೆಯಾಗುತ್ತಿದೆ. ಬಡವರ ಪಾಲಿಗಂತೂ ಗಗನ ಕುಸುಮವಾಗುತ್ತಿದೆ. ಒಮ್ಮೆ ಚಿನ್ನದ ಬೆಲೆ ಯಾವಾಗ ಎಷ್ಟು ಏರಿಕೆಯಾಯಿತು ಎಂದು ಹಿಂದೆ ತಿರುಗಿ ನೋಡುವುದಾದರೆ,

ಕಳೆದ ಒಂದು ಶತಮಾನದಲ್ಲಿ ಕಾಲಕ್ಕೆ ತಕ್ಕಂತೆ ಚಿನ್ನದ ಬೆಲೆಯೂ ವಿಪರೀತ ಏರಿಕೆಯಾಗಿದೆ. ಇತಿಹಾಸದ ಪುಟಗಳಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎಂದು ನೋಡುವುದಾದರೆ 1925 ರಲ್ಲಿ ರೂ. 18.75 ರಷ್ಟಿದ್ದ ಬಂಗಾರದ ಬೆಲೆ ನೂರು ರೂಪಾಯಿ ತಲುಪಲು 100 ರೂಪಾಯಿ ತಲುಪಲು 34 ವರ್ಷ ಬೇಕಾಯಿತು. ಆದರೆ ಇಂದು 2025 ರಲ್ಲಿ ಲಕ್ಷದ ಸನಿಹಕ್ಕೆ ಬಂದು ನಿಂತಿದೆ.

1925 ರಿಂದ 2024 ರವರೆಗೂ ಚಿನ್ನದ ದರ ಏರಿಕೆಯಾದ ಅಂಕಿಅಂಶಗಳು

 

100 ರೂಪಾಯಿ :
1959 ರಲ್ಲಿ, ಹತ್ತು ಗ್ರಾಂ ಚಿನ್ನದ ಬೆಲೆ ಮೊದಲ ಬಾರಿಗೆ 100 ರೂಪಾಯಿಗಳನ್ನು ತಲುಪಿತ್ತು.

1000 ರೂಪಾಯಿ :
20 ವರ್ಷಗಳ ನಂತರ, 1979 ರಲ್ಲಿ, ಅದೇ ಹತ್ತು ಗ್ರಾಂ ಚಿನ್ನದ ಬೆಲೆ ಒಂದು ಸಾವಿರ ರೂಪಾಯಿಯಾಯಿತು.

10,000 ರೂಪಾಯಿ :
2007 ರ ಹೊತ್ತಿಗೆ ಅದು 10,000 ಕ್ಕೆ ತಲುಪಿತ್ತು. ಈ ಹತ್ತು ಪಟ್ಟು ಹೆಚ್ಚಳಕ್ಕೆ 28 ವರ್ಷಗಳು ಬೇಕಾಯಿತು. ಸಾವಿರದಿಂದ 10 ಸಾವಿರಕ್ಕೆ ಏರಿಕೆಯಾಗಲು ಸುಮಾರು ಮೂರು ದಶಕಗಳೇ ಬೇಕಾಯಿತು.

40,000 ರೂಪಾಯಿಯಿಂದ 50,000 :
ಆದರೆ 40 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿಗೆ ಏರಿಕೆಯಾಗಲು ಕೇವಲ ನಾಲ್ಕು ವರ್ಷಗಳು ಬೇಕಾಯಿತು. 2021 ರಲ್ಲಿ ಚಿನ್ನದ ಬೆಲೆ 50 ಸಾವಿರ ಇತ್ತು, ಆದರೆ ಈ ವರ್ಷ ಅದು 90 ಸಾವಿರ ದಾಟಿದೆ.

1925 ರಲ್ಲಿ ಚಿನ್ನದ ದರ 18.75 ರಷ್ಟಿತ್ತು. ಕ್ರಮೇಣ ನೂರು ರೂಪಾಯಿ ತಲುಪಲು 34 ವರ್ಷ ಬೇಕಾಯಿತು.
100 ರಿಂದ 1000 ರೂಪಾಯಿಗೆ ಏರಲು 20 ವರ್ಷಗಳು ಬೇಕಾಯಿತು. 1,000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಏರಲು ಒಟ್ಟು 28 ವರ್ಷಗಳು ಬೇಕಾಯಿತು. ಅದೇ ಪ್ರಮಾಣದ ಚಿನ್ನ 10,000 ದಿಂದ 50,000 ರುಪಾಯಿ ತಲುಪಲು ಕೇವಲ 14 ವರ್ಷಗಳು ಬೇಕಾಯಿತು. 10,000 ದಾಟಿದ ನಂತರ ಚಿನ್ನದ ಓಟ ಮಿಂಚಿನ ವೇಗದಲ್ಲಿ ಏರಲು ಪ್ರಾರಂಭವಾಯಿತು. ಈ 14 ವರ್ಷಗಳ ಅವಧಿಯಲ್ಲಿ, ಚಿನ್ನವು ವಿಶ್ವದ ಅತ್ಯಂತ ಬೆಲೆಬಾಳುವ ಲೋಹವಾದ ಪ್ಲಾಟಿನಂ ಅನ್ನು ಸಹ ಹಿಂದಿಕ್ಕಿದೆ. ಅಲ್ಲಿಯವರೆಗೆ ಲೋಹಗಳ ರಾಜನಾಗಿದ್ದು, ಅತ್ಯಧಿಕ ಬೆಲೆಯನ್ನು ಗಳಿಸುತ್ತಿದ್ದ ಪ್ಲಾಟಿನಂ, ಚಿನ್ನದ ದಾಳಿಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. 50 ಸಾವಿರ ದಾಟಿದ ನಂತರ ಹಿಡಿತಕ್ಕೆ ಸಿಗದ ರೀತಿಯಲ್ಲಿ ಬೆಳೆಯಲಾರಂಭಿಸಿತು. ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಅದು 90,000 ಕ್ಕೆ ಏರಿತು. ಅದು ಈಗ 2025 ರಲ್ಲಿ 98,000 ಗಡಿಯನ್ನು ದಾಟಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಇದು ಒಂದು ಲಕ್ಷವನ್ನು ಮೀರಿ, ಒಂದು ಕಾಲು ಲಕ್ಷ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.



source https://suddione.com/when-and-how-much-did-the-price-of-gold-increase-in-a-hundred-years-here-is-the-complete-information/

Post a Comment

0 Comments